Home ಕ್ರೈಂ ನ್ಯೂಸ್ ಪ್ರಯಾಣಿಕ ಯುವತಿಗೆ ನರಕಯಾತನೆ ನೀಡಿದ ಆಟೋ ಡ್ರೈವರ್: ಪಾಳುಬಿದ್ದ ಅಂಗಡಿಯಲ್ಲಿ ಗ್ಯಾಂಗ್‌ರೇಪ್ ಮಾಡಿದ ಚಾಲಕ ಸೇರಿ ಇಬ್ಬರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಯಾಣಿಕ ಯುವತಿಗೆ ನರಕಯಾತನೆ ನೀಡಿದ ಆಟೋ ಡ್ರೈವರ್: ಪಾಳುಬಿದ್ದ ಅಂಗಡಿಯಲ್ಲಿ ಗ್ಯಾಂಗ್‌ರೇಪ್ ಮಾಡಿದ ಚಾಲಕ ಸೇರಿ ಇಬ್ಬರ ಬಂಧನ!

Share
ಯುವತಿ
Share

ಸಾಸಾರಾಮ್ (ಬಿಹಾರ): ಬಿಹಾರದ ರೋಹ್ತಾಸ್ ಜಿಲ್ಲೆಯ ಸಾಸಾರಾಮ್‌ನಲ್ಲಿ ಆಟೋ-ರಿಕ್ಷಾ ಚಾಲಕ ಹಾಗೂ ಆತನ ಸಹಚರನಿಂದ 18 ವರ್ಷದ ಯುವತಿಯೊಬ್ಬಳು ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರಕ್ಕೀಡಾದ ಭೀಕರ ಘಟನೆ ವರದಿಯಾಗಿದೆ. ತಾರಾಚಂಡಿ ಸಮೀಪದಿಂದ ಬೇಡಾ ಕಡೆಗೆ ತೆರಳಲು ಆಟೋ ಹತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಯುವತಿ ಆಟೋ ಹತ್ತಿದ ಬಳಿಕ ಚಾಲಕ ನಿಗದಿತ ಮಾರ್ಗದ ಬದಲಿಗೆ ನಿರ್ಜನ ಪ್ರದೇಶದಲ್ಲಿದ್ದ ಪಾಳುಬಿದ್ದ ಅಂಗಡಿಯೊಂದಕ್ಕೆ ಕರೆದೊಯ್ದು ತನ್ನ ಸ್ನೇಹಿತನೊಂದಿಗೆ ಸೇರಿ ಈ ದೌರ್ಜನ್ಯ ಎಸಗಿದ್ದಾನೆ. ಸಂತ್ರತೆಯ ದೂರಿನ ಮೇರೆಗೆ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂದೀಪ್ ಕುಮಾರ್ ಹಾಗೂ ಚಿತ್ರಂಜನ್ ಪಾಸ್ವಾನ್  ಎಂಬ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ವೈದ್ಯಕೀಯ ತಪಾಸಣೆ: ಅತ್ಯಾಚಾರಕ್ಕೀಡಾದ ಯುವತಿಯನ್ನು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಸಾಸಾರಾಮ್ ಸಾದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಗುಸರಾಯ್ ಘಟನೆಯ ನೆನಪು: ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರ ಮೇಲೆ ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಹಿಂಸೆ ನೀಡಿದ್ದ ಘಟನೆ ಈ ಹಿಂದೆ ವರದಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಪೊಲೀಸ್ ಕ್ರಮ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿರುವ ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ತೀವ್ರಗೊಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles