SUDDIKSHANA KANNADA NEWS/ DAVANAGERE/ DATE:17-03-2025
ದಾವಣಗೆರೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಟೀಮ್ ಪ್ರಭಾ ವಿಕಾಸ ವತಿಯಿಂದ ರಾಮನಗರದ ಕೈಗಾರಿಕಾ ಪ್ರದೇಶದಲ್ಲಿರುವ ವಿಶೇಷ ದತ್ತು ಸಂಸ್ಥೆ ಅಮೂಲ್ಯ (ಜಿ) ಕೇಂದ್ರ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಆಟದ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸದರ ಸಲಹೆಯಂತೆ ಜನ್ಮದಿನದ ಪ್ರಯುಕ್ತ ದುಂದುವೆಚ್ಚ ಮಾಡಬಾರದೆಂಬ ಸಂದೇಶಕ್ಕೆ ಸ್ಪಂದಿಸಿ ಮಾದರಿಯಾಗಿ ಆಚರಣೆ ಮಾಡುವ ಉದ್ದೇಶದಿಂದ ಬಾಲಮಂದಿರದ ಮಕ್ಕಳಿಗೆ ಅವಶ್ಯಕತೆಯಿರುವ ವಸ್ತುಗಳನ್ನು ಟೀಮ್ ಪ್ರಭಾ ವಿಕಾಸ ನ ಮುಖ್ಯಸ್ಥರಾದ ಡಾ.ಫಣಿಕೃಷ್ಣ ಮಾರ್ಗದರ್ಶನದಲ್ಲಿ ತಂಡದವರಾದ ಎಸ್.ಪಿ ಕಲ್ಲೇಶ್, ಶೇಕ್ ವಸೀಮ್, ಅರುಣ್ ಮಣಿಕಂಠ, ಪ್ರಜ್ವಲ್ ಗೌಡ, ಜಿ. ವಿ. ಹರೀಶ್, ಪ್ರಜ್ವಲ್, ಬಸವರಾಜ್, ತೇಜಸ್ವಿನಿ ಪ್ರಕಾಶ್, ಎಸ್. ಬಿ. ಸಂಜಯ್, ರಾಮಪ್ರಸಾದ್ ಅವರು ಒಳಾಂಗಣ ಹಾಗೂ ಹೊರಾಂಗಣ ಆಟದ ಪರಿಕರಗಳು ಹಾಗೂ ಮಕ್ಕಳಿಗೆ ಆಟಿಕೆಗಳನ್ನು ಕೊಡುಗೆಯಾಗಿ ನೀಡಿದರು.