Home ದಾವಣಗೆರೆ ಪ್ರತಿಷ್ಠಿತ ‘ಪೆರಿಯಾರ್ ಅರಿವುಲಗಂ’ ಗ್ರಂಥಾಲಯ ಪುಸ್ತಕ ಖರೀದಿ ಹಗರಣ: ಅಣ್ಣಾಮಲೈ ಉನ್ನತ ತನಿಖೆಗೆ ಆಗ್ರಹ, ಟಿವಿಕೆ-ಡಿಎಂಕೆ ನಡುವೆ ತೀವ್ರ ವಾಕ್ಸಮರ!
ದಾವಣಗೆರೆನವದೆಹಲಿಬೆಂಗಳೂರು

ಪ್ರತಿಷ್ಠಿತ ‘ಪೆರಿಯಾರ್ ಅರಿವುಲಗಂ’ ಗ್ರಂಥಾಲಯ ಪುಸ್ತಕ ಖರೀದಿ ಹಗರಣ: ಅಣ್ಣಾಮಲೈ ಉನ್ನತ ತನಿಖೆಗೆ ಆಗ್ರಹ, ಟಿವಿಕೆ-ಡಿಎಂಕೆ ನಡುವೆ ತೀವ್ರ ವಾಕ್ಸಮರ!

Share
ಅಣ್ಣಾಮಲೈ
Share

ಚೆನ್ನೈ / ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇತ್ತೀಚೆಗೆ ಉದ್ಘಾಟಿಸಿರುವ 7 ಅಂತಸ್ತಿನ ಬೃಹತ್ ಸಾರ್ವಜನಿಕ ಗ್ರಂಥಾಲಯ ‘ಪೆರಿಯಾರ್ ಅರಿವುಲಗಂ’ ಗಾಗಿ ನಡೆಸಲಾದ ಪುಸ್ತಕ ಖರೀದಿ ಹಗರಣವು ತಮಿಳುನಾಡಿನಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.

ಖ್ಯಾತ ಲೇಖಕ ಪೆರುಮಾಳ್ ಮುರುಗನ್ ಅವರು ತಮ್ಮ ಲೇಖನದ ಮೂಲಕ ಪುಸ್ತಕ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ನಕಲಿ ಲೇಖಕರು ಹಾಗೂ ಕೃತಕ ಬುದ್ಧಿಮತ್ತೆ (AI) ಬಳಸಿ ಮುದ್ರಿಸಲಾದ ಪುಸ್ತಕಗಳ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಆಡಳಿತರೂಢ ಟಿವಿಕೆ (TVK) ಹಾಗೂ ಪ್ರತಿಪಕ್ಷ ಡಿಎಂಕೆ ನಡುವೆ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಗ್ರಂಥಾಲಯದ ಪುಸ್ತಕ ಖರೀದಿ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಲೇಖಕ ಪೆರುಮಾಳ್ ಮುರುಗನ್ ಆರೋಪಿಸಿದ್ದಾರೆ. ಸುಮಾರು 1,800ಕ್ಕೂ ಹೆಚ್ಚು ಪುಸ್ತಕಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ ಎಂದಿರುವ ಅವರು, ‘ತ್ರಿಶಾ ವಿಜಯ್’, ‘ವಿಜಯಾ ಬಲು’, ‘ಜ್ಯೋತಿ ಶರವಣನ್’ ಮುಂತಾದ ಹಿಂದೆಂದೂ ಕೇಳದ ಕಾಲ್ಪನಿಕ ಲೇಖಕರ ಹೆಸರಿನಲ್ಲಿ ಪುಸ್ತಕಗಳನ್ನು ಮುದ್ರಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು ಈ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ವಿವಾದದ ಹಿನ್ನೆಲೆ: ಕೊಯಮತ್ತೂರಿನಲ್ಲಿರುವ ನೂತನ ‘ಪೆರಿಯಾರ್ ಅರಿವುಲಗಂ’ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸಿದವರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಾಹಿತಿ ಪೆರುಮಾಳ್ ಮುರುಗನ್ ಆರೋಪ.

ನಕಲಿ ಲೇಖಕರು ಹಾಗೂ AI ಪುಸ್ತಕಗಳು: ಅಸ್ತಿತ್ವದಲ್ಲೇ ಇಲ್ಲದ ಪ್ರಕಾಶನಗಳು, AI ಮೂಲಕ ಸಿದ್ಧಪಡಿಸಿದ ವಿಷಯಗಳು ಹಾಗೂ ‘ತ್ರಿಶಾ ವಿಜಯ್’ ಸೇರಿದಂತೆ ವಿಚಿತ್ರ ಲೇಖಕರ ಹೆಸರಿನಲ್ಲಿ ಪುಸ್ತಕಗಳನ್ನು ಅಧಿಕ ಬೆಲೆಗೆ ಖರೀದಿಸಿರುವುದು ಪತ್ತೆ.

ಅಣ್ಣಾಮಲೈ ಆಗ್ರಹ: ಸಾರ್ವಜನಿಕ ಹಣದ ದುರುಪಯೋಗ ಮತ್ತು ಮುಂದಿನ ಪೀಳಿಗೆಗೆ ಆಗಿರುವ ದ್ರೋಹದ ಕುರಿತು ಸಂಪೂರ್ಣ ದಾಖಲೆಗಳನ್ನು ಬಹಿರಂಗಪಡಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಆಗ್ರಹ.

ರಾಜಕೀಯ ವಾಕ್ಸಮರ: ಇದು ಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದ ಹಗರಣ ಎಂದು ಮುಖ್ಯಮಂತ್ರಿ ವಿಜಯ್ ವಾಗ್ದಾಳಿ ನಡೆಸಿದರೆ, ಪುಸ್ತಕಗಳ ಮೇಲಿನ ಸೀಲ್ ದಿನಾಂಕ ಮತ್ತು ಲೇಖಕರ ಹೆಸರುಗಳನ್ನು ಮುಂದಿಟ್ಟು ಡಿಎಂಕೆ ತಿರುಗೇಟು ನೀಡಿದೆ.

ಕಾಂಗ್ರೆಸ್ ಸಂಸದ ಮಾಣಿಕಮ್ ಟಾಗೋರ್ ಸೇರಿದಂತೆ ವಿವಿಧ ನಾಯಕರು ತಮಿಳುನಾಡಿನಾದ್ಯಂತ ಗ್ರಂಥಾಲಯಗಳ ಪುಸ್ತಕ ಖರೀದಿಯ ಸಮಗ್ರ ಆಡಿಟ್ ನಡೆಸಬೇಕೆಂದು ಒತ್ತಾಯಿಸಿದ್ದು, ರಾಜ್ಯದಲ್ಲಿ ಇದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *