Home ಕ್ರೈಂ ನ್ಯೂಸ್ ತಮಿಳುನಾಡು ಸಿಎಂ ವಿಜಯ್‌ರಿಂದ ಮೊದಲ ಮಹತ್ವದ ನಿರ್ಧಾರ: ಮಹಿಳೆಯರು ಫುಲ್ ಖುಷ್ ಯಾಕೆ?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುವಾಣಿಜ್ಯ

ತಮಿಳುನಾಡು ಸಿಎಂ ವಿಜಯ್‌ರಿಂದ ಮೊದಲ ಮಹತ್ವದ ನಿರ್ಧಾರ: ಮಹಿಳೆಯರು ಫುಲ್ ಖುಷ್ ಯಾಕೆ?

Share
ತಮಿಳುನಾಡು
Share

ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ಜೋಸೆಫ್ ವಿಜಯ್ ಅವರು ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ಕ್ರಮವನ್ನು ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ಶಾಲೆಗಳು, ದೇವಸ್ಥಾನಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಸರ್ಕಾರಿ ಸ್ವಾಮ್ಯದ (TASMAC) ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ.

ಮುಂದಿನ ಎರಡು ವಾರಗಳೊಳಗೆ ಈ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ‘ವ್ಯಸನ ಮುಕ್ತ ತಮಿಳುನಾಡು’ ಭರವಸೆಯತ್ತ ಇದು ಮೊದಲ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.

ಮುಚ್ಚಲಾಗುವ ಅಂಗಡಿಗಳಲ್ಲಿ 276 ಧಾರ್ಮಿಕ ಸ್ಥಳಗಳ ಸಮೀಪ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಆಸುಪಾಸಿನಲ್ಲಿವೆ. ಈ ನಿರ್ಧಾರವು ಸಾರ್ವಜನಿಕರಲ್ಲಿ ಶ್ಲಾಘನೆ ವ್ಯಕ್ತವಾಗಿದ್ದರೂ, ರಾಜ್ಯದ ಆದಾಯದ ಮೇಲೆ ಇದು ಬೀರುವ ಪರಿಣಾಮದ ಕುರಿತು ಚರ್ಚೆಗಳು ಆರಂಭವಾಗಿವೆ.

ಈ ಆದೇಶವು ಕೇವಲ ಸೂಕ್ಷ್ಮ ಪ್ರದೇಶಗಳಲ್ಲಿರುವ ಅಂಗಡಿಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಟಾಸ್ಮ್ಯಾಕ್‌ನ ಒಟ್ಟು 4,765 ಅಂಗಡಿಗಳಲ್ಲಿ 717 ಅಂಗಡಿಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles