ನವದೆಹಲಿ: ದಿನಸಿ ಬೆಲೆಗಳು ಗಗನಕ್ಕೇರುತ್ತಿರುವ ಈ ಕಾಲದಲ್ಲಿ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಗ್ರಾಹಕರೊಬ್ಬರಿಗೆ ಭರ್ಜರಿ ಆಫರ್ ಲಭಿಸಿದೆ. ಎಕ್ಸ್ ಬಳಕೆದಾರರಾದ @MahiMishra98 ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಇನ್‌ಸ್ಟಾಮಾರ್ಟ್‌ನಲ್ಲಿ ಬಿಸ್ಕತ್ತುಗಳನ್ನು ಆರ್ಡರ್ ಮಾಡಿದ ಗ್ರಾಹಕರಿಗೆ ಕೇವಲ 1 ರೂಪಾಯಿಗೆ 1 ಕೆಜಿ ಈರುಳ್ಳಿ ನೀಡಲಾಗಿದೆ.
ಆರ್ಡರ್ ಡೆಲಿವರಿ ಆದಾಗ ಪಾರ್ಸೆಲ್‌ನಲ್ಲಿ 1 ಕೆಜಿ ಈರುಳ್ಳಿ ನೋಡಿ ಗ್ರಾಹಕರು ಆಶ್ಚರ್ಯಚಕಿತರಾಗಿದ್ದಾರೆ.
ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿಗೆ ಅಂದಾಜು 60 ರೂ. ಬೆಲೆ ಇದ್ದು, ಕೇವಲ 1 ರೂಪಾಯಿಗೆ ಇದು ಸಿಕ್ಕಿರುವುದು ಗ್ರಾಹಕರಿಗೆ ನಂಬಲು ಅಸಾಧ್ಯವಾಗಿತ್ತು. ಇದು ತಪ್ಪಾಗಿ ಬಂದಿರಬಹುದೇ ಎಂದು ಗ್ರಾಹಕ ಡೆಲಿವರಿ ಎಕ್ಸಿಕ್ಯೂಟಿವ್ ಬಳಿ ಕೇಳಿದಾಗ, “ಇಲ್ಲ, ಪ್ರಸ್ತುತ ಇಂತಹ ಆಫರ್ ನಡೆಯುತ್ತಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಪೋಸ್ಟ್ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ತಮಗೆ ಕೇವಲ ಡೆಲಿವರಿ ಚಾರ್ಜ್ ಹೆಚ್ಚಳ ಮಾತ್ರ ಕಾಣಿಸುತ್ತದೆ, ಇಂತಹ ಆಫರ್ ಗಳು ಸಿಗುವುದಿಲ್ಲ ಎಂದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಈ ಪೋಸ್ಟ್ ಇದೀಗ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನನ್ನ ಇನ್‌ಸ್ಟಾಮಾರ್ಟ್‌ನಲ್ಲಿ ಕೇವಲ ಡೆಲಿವರಿ ಚಾರ್ಜ್ ಮತ್ತು ಮಳೆಯ ಕಾರಣದಿಂದ ಹೆಚ್ಚುವರಿ ಶುಲ್ಕ ಮಾತ್ರ ಕಾಣಿಸುತ್ತದೆ, ಇಂತಹ ಆಫರ್ ಗಳು ಸಿಗುವುದೇ ಇಲ್ಲ” ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, “1 ರೂಪಾಯಿಗೆ 1 ಕೆಜಿ ಈರುಳ್ಳಿ ಎಂದರೆ ನಿಜಕ್ಕೂ ಅದ್ಭುತವಾದ ಡೀಲ್” ಎಂದು ಕಮೆಂಟ್ ಮಾಡಿದ್ದಾರೆ.





Leave a comment