ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಿವಶಂಕರಪ್ಪರ ಆರೋಗ್ಯ ವೃದ್ಧಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಅನಾಥ ಮಕ್ಕಳಿಗೆ ಸಿಹಿ ಊಟ

On: January 27, 2025 6:54 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:27-01-2025

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಆರೋಗ್ಯ ವೃದ್ಧಿಗೆ ದಾವಣಗೆರೆ ತಾಲೂಕು ಘಟಕವು ಪ್ರಾರ್ಥಿಸಿದೆ.

ನಗರದ ಎಸ್. ಎಸ್. ಬಡಾವಣೆಯಲ್ಲಿರುವ ಅಂಗವಿಕಲರ ಆಶಾಕಿರಣ ಟ್ರಸ್ಟ್ ನಲ್ಲಿ ಡಾ. ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಂತರಾಗಿ ಹಿಂದಿರುಗಿದ್ದಕ್ಕೆ ಹಾಗೂ ಅವರಿಗೆ ಭಗವಂತನು ಹೆಚ್ಚಿನ ಆರೋಗ್ಯ ಕರುಣಿಸಿ ಶತಾಯುಷಿ ಆಗಲೆಂದು ಪ್ರಾರ್ಥಿಸಿ, ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ತಾಲ್ಲೂಕು ಘಟಕ ಹಾಗೂ ಯುವ ಘಟಕದ ವತಿಯಿಂದ ವಿಕಲಚೇತನ ಹಾಗೂ ಅನಾಥ ಮಕ್ಕಳಿಗೆ ಭೋಜನದ ವ್ಯವಸ್ಥೆ ಮಾಡಿ ಸಿಹಿ ವಿತರಿಸಲಾಯಿತ.

ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ, ಪ್ರಧಾನ ಕಾರ್ಯದರ್ಶಿ ಗುರುಶಾಂತ್ ಸೋಗಿ, ಕೋಶಧ್ಯಕ್ಷ ಕಾರ್ತಿಕ್ ಹಿರೇಮಠ್, ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ಯುವ ಘಟಕದ ಅಧ್ಯಕ್ಷ ಅಜಿತ್ ಆಲೂರ್, ಸಮಿತಿ ಸದಸ್ಯರಾದ ಗುಮ್ಮನೂರು ಚನ್ನಪ್ಪ, ಶಿವರತನ್, ಅನಿಲ್ ಬಿ ಆರ್ , ನಯನ ಜಿ ಜೆ, ಮಂಜುನಾಥ್ ದೊಡ್ಡಮನಿ, ಸಂಜಯ್ ಚಾರ್ಮಾನಿ, ಶಿವಕುಮಾರ್ ಹಲಗೇರಿ, ಸುನಿಲ್ ಬಾಗೇವಾಡಿ, ಆದರ್ಶ್, ಹಿತೇಶ್ ಪ್ರಸನ್ನ, ಅಥರ್ವ ಮೋತಿ, ತನಿಷ್ಕ ಬಾದಾಮಿ, ನಿಶ್ಚಿತ್ ಮಗಾನಹಳ್ಳಿ, ಅರುಣ್ ಶಾಮನೂರು, ಹೇಮಂತ್ ಎ ಜೆ, ಮಂಜುನಾಥ್ ಎನ್, ಚಿರಂತ್ ವೈ ಎಸ್ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment