ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತನ ವಿರುದ್ಧ ಎಫ್‌ಐಆರ್‌

On: May 17, 2024 3:45 PM
Follow Us:
---Advertisement---

ನವದೆಹಲಿ: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ದೌರ್ಜನ್ಯವೆಸಗಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇದೀಗ ಪ್ರಕರಣ ಸಂಬಂಧಪಟ್ಟಂತೆ  ಸ್ವಾತಿ ಮಲಿವಾಲ್‌ ಹೇಳಿಕೆ ಬಳಿಕ ಐಪಿಸಿ 354, 323, 506,509 ಅಡಿಯಲ್ಲಿ  ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ. ದೌರ್ಜನ್ಯ ನಡೆದ ಘಟನೆಯ ಕುರಿತು ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿತ್ತು. ನನಗಾಗಿ ಪ್ರಾರ್ಥಿಸಿದವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ

ಚಾರಿತ್ರ್ಯಹರಣ ಮಾಡಲು ಯತ್ನಿಸಿದವರು ಬೇರೆಯವರ ಸೂಚನೆ ಮೇರೆಗೆ ಮಾಡುತ್ತಿದ್ದಾರೆ. ಅವರನ್ನೂ ದೇವರು ನೆಮ್ಮದಿಯಿಂದ ಇಡಲಿ ಎಂದು ಬೇಡಿಕೊಂಡಿದ್ದೇನೆ. ದೇಶದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಸ್ವಾತಿ ಮಲಿವಾಲ್ ಮುಖ್ಯವಲ್ಲ, ದೇಶದ ಸಮಸ್ಯೆಗಳು ಮುಖ್ಯ. ಈ ಘಟನೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿಯವರಿಗೆ ವಿಶೇಷ ವಿನಂತಿ ಎಂದು ಮಲಿವಾಲ್‌ ಪೋಸ್ಟ್‌ ಹಾಕಿದ್ದಾರೆ.

Join WhatsApp

Join Now

Join Telegram

Join Now

Leave a Comment