ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ರಹಿತರ ಸಮೀಕ್ಷೆ

On: March 11, 2024 8:18 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-03-2024

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ನಿವೇಶನ, ವಸತಿ ರಹಿತ ಬಡಜನರಿಗೆ ಹೌಸಿಂಗ್ ಫಾರ್ ಆಲ್ 2022 ರ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ನಿವೇಶನ, ವಸತಿ ರಹಿತ ಬಡಜನರು 2015 ರಿಂದ 2024 ರವರೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆನ್‍ಲೈನ್ ತಂತ್ರಾಂಶದಲ್ಲಿ ವಿವಿಧ ವಾರ್ಡ್‍ಗಳಿಂದ ಬೇಡಿಕೆ ಸಮೀಕ್ಷೆ ಸರ್ವೇ ಪ್ರಕಾರ 29379 ನಿವೇಶನ, ವಸತಿ ರಹಿತರು ಅರ್ಜಿಗಳನ್ನು ಸಲ್ಲಿಸಿರುತ್ತಾರೆ.

ಈ ವಸತಿ, ನಿವೇಶನ ರಹಿತ ಅರ್ಜಿಗಳನ್ನು ಭೌತಿಕವಾಗಿ ಪರಿಶೀಲಿಸಲು ಅರ್ಜಿದಾರರು ವಾಸ ಮಾಡುವ ಸ್ಥಳಗಳಿಗೆ ಪಾಲಿಕೆ ಕಂದಾಯ ಶಾಖೆ, ವಸತಿ ಶಾಖೆಯ ನೌಕರರು, ಅಧಿಕಾರಿಗಳು ಭೇಟಿ ನೀಡಿದಾಗ ಅರ್ಜಿದಾರರು ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ಹಾಗೂ ಇತರೆ ದಾಖಲೆಗಳನ್ನು ನೀಡಿ ಸರ್ವೇ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

ಅಂಚೆ ವಿಭಾಗೀಯ ಡಾಕ್ ಅದಾಲತ್:

ಸಾರ್ವಜನಿಕರ ಮತ್ತು ಅಂಚೆ ಗ್ರಾಹಕರ ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರು ಮತ್ತು ಸಲಹೆಗಳನ್ನು ಪಡೆಯಲು ಮಾ.20 ರಂದು ಸಂಜೆ 4 ಗಂಟೆಗೆ ದಾವಣಗೆರೆ ಅಂಚೆ ಅಧೀಕ್ಷಕರ ಕಚೇರಿ, ಪ್ರಧಾನ ಅಂಚೆ ಕಚೇರಿಯ ಮೊದಲನೇ ಮಹಡಿ, ಗಡಿಯಾರ ಕಂಬದ ಹತ್ತಿರ ಮಂಡಿಪೇಟೆ ಇಲ್ಲಿ ಡಾಕ್ ಅದಾಲತ್ ನೆಡೆಸಲಾಗುವುದು ಎಂದು ಅಂಚೆ ಅಧೀಕ್ಷಕರಾಧ ಚಂದ್ರಶೇಖರ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment