ಸೂರತ್ (ಗುಜರಾತ್): ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಹುಚ್ಚಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತ್ರವಿರುವ 500 ರೂಪಾಯಿ ನೋಟನ್ನು ಬಳಸಿ ಅಶ್ಲೀಲ ಹಾಗೂ ಆಕ್ಷೇಪಾರ್ಹ ರೀತಿಯಲ್ಲಿ ವೀಡಿಯೊ ಹಂಚಿಕೊಂಡಿದ್ದ ಸೂರತ್‌ನ ಪ್ರಸಿದ್ಧ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಸಿಮ್ರಾನ್ ಪಟೇಲ್ (47) ಅವರನ್ನು ಸೂರತ್ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ವೀಡಿಯೊದಲ್ಲೇನಿತ್ತು?:
સોશિયલ મીડિયા પર ફોલોઅર્સ અને લાઇક્સ મેળવવાની લાલચમાં કાયદાનું ઉલ્લંઘન ભારે પડી શકે છે… pic.twitter.com/iWR69Pgps9
— Surat City Police (@CP_SuratCity) October 4, 2026
ಸೂರತ್ ನಗರದ ಅಡಾಜಣ್ ಪ್ರದೇಶದ ನಿವಾಸಿಯಾಗಿರುವ ಸಿಮ್ರಾನ್ ಪಟೇಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 10 ಲಕ್ಷ (1 ಮಿಲಿಯನ್) ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 12 ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಈಕೆ, ಮದುವೆಯಾದ ಬಳಿಕ ಕಳೆದ 17 ವರ್ಷಗಳಿಂದ ಸೂರತ್‌ನಲ್ಲಿ ನೆಲೆಸಿದ್ದು, ನಿರಂತರವಾಗಿ ಶಾರ್ಟ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
ಅಕ್ಟೋಬರ್ 1 ರಂದು ಅಂದರೆ ಗಾಂಧಿ ಜಯಂತಿಯ ಮುನ್ನಾದಿನ ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆಯ ನಡುವೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ₹500 ಮುಖಬೆಲೆಯ ನೋಟಿನ ಮೇಲಿರುವ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಅತ್ಯಂತ ಅಶ್ಲೀಲ, ಲೈಂಗಿಕ ಪ್ರಚೋದಕ ಸನ್ನೆಗಳು ಹಾಗೂ ನಡವಳಿಕೆಯನ್ನು ಪ್ರದರ್ಶಿಸಲಾಗಿತ್ತು.
ದೂರು ಸಲ್ಲಿಕೆ ಮತ್ತು ಆರೋಪಿ ಬಂಧನ:
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಹಾಗೂ ಗೋರಕ್ಷಾ ಮಂಚ್ ಮುಖಂಡ ಧರ್ಮೇಶ್ ಗೇಮಿ ಎಂಬುವವರು ತಕ್ಷಣವೇ ಸೂರತ್ ಸೈಬರ್ ಕ್ರೈಂ ವಿಭಾಗವನ್ನು ಸಂಪರ್ಕಿಸಿ ದೂರು ದಾಖಲಿಸಿದರು. ದೂರಿನ ಅನ್ವಯ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಆರ್. ಪಟೇಲ್ ನೇತೃತ್ವದ ತಾಂತ್ರಿಕ ತಂಡವು ಆರೋಪಿಯ ಖಾತೆಯನ್ನು ಟ್ರ್ಯಾಕ್ ಮಾಡಿ ಸಿಮ್ರಾನ್ ಪಟೇಲ್ ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಯ ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯ ಪ್ರಸಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಸಿಮ್ರಾನ್ ಆ ವೀಡಿಯೊವನ್ನು ಡಿಲೀಟ್ ಮಾಡಿದ್ದರು.
ಪೊಲೀಸರ ಬಿಡುಗಡೆ ಮಾಡಿದ ‘ಬಿಫೋರ್ – ಆಫ್ಟರ್’ ವೀಡಿಯೊ:
ಸಿಮ್ರಾನ್ ಪಟೇಲ್ ಬಂಧನದ ಬಳಿಕ ಸೂರತ್ ಪೊಲೀಸರು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ವಿಶಿಷ್ಟ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮೊದಲ ಭಾಗದಲ್ಲಿ ಆರೋಪಿ ಹಣದ ನೋಟಿನೊಂದಿಗೆ ಅಶ್ಲೀಲ ಸನ್ನೆ ಮಾಡುತ್ತಿರುವ ದೃಶ್ಯವಿದ್ದರೆ, ಎರಡನೇ ಭಾಗದಲ್ಲಿ ಆಕೆ ಕೈಗೆ ಕೈಕೋಳ (ಹ್ಯಾಂಡ್‌ಕಫ್) ತೊಟ್ಟು ಪೊಲೀಸ್ ವಶದಲ್ಲಿ ನಿಂತು ಕ್ಷಮೆಯಾಚಿಸುತ್ತಿರುವ ದೃಶ್ಯವಿದೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ:
ಪ್ರಕರಣದ ಕುರಿತು ಮಾತನಾಡಿದ ಸೈಬರ್ ಕ್ರೈಂ ಪೊಲೀಸರು, “ಕೇವಲ ಪ್ರಚಾರ, ಲೈಕ್ಸ್ ಅಥವಾ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ನಾಯಕರು, ಧಾರ್ಮಿಕ ಚಹ್ನೆಗಳು ಅಥವಾ ಸಾಮಾಜಿಕ ಸಂಕೇತಗಳನ್ನು ನಿಂದಿಸುವ ಹಾಗೂ ಅಶ್ಲೀಲವಾಗಿ ಬಿಂಬಿಸುವ ವೀಡಿಯೊ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
- Gujarat News
- Instagram Influencer Arrest
- IT Act Section 67
- Mahatma Gandhi Reel
- Obscene Reel Gandhi Note
- Simran Patel
- Simran Patel Arrested
- Surat Cyber Crime
- Surat Latest News
- Surat Police
- ಅಶ್ಲೀಲ ರೀಲ್ಸ್ ಬಂಧನ
- ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಆತ್ಮಹತ್ಯೆ ಯತ್ನ
- ಐಟಿ ಕಾಯ್ದೆ ಸೆಕ್ಷನ್ 67
- ಗಾಂಧಿ ಜಯಂತಿ
- ಗುಜರಾತ್ ಸುದ್ದಿ
- ಮಹಾತ್ಮ ಗಾಂಧೀಜಿ
- ಸಿಮ್ರಾನ್ ಪಟೇಲ್
- ಸೂರತ್ ಪೊಲೀಸರು
- ಸೂರತ್ ಸೈಬರ್ ಕ್ರೈಂ





Leave a comment