ತಿರುಪತಿ: ಮದುವೆಯಾಗುವುದಾಗಿ ನಂಬಿಸಿ ಜಾರ್ಜಿಯಾದಲ್ಲಿ ಓದುತ್ತಿದ್ದ MBBS ವಿದ್ಯಾರ್ಥಿನಿಗೆ ವಂಚಿಸಿ, ಧರ್ಮ ಮತಾಂತರಗೊಳ್ಳುವಂತೆ ಬೆದರಿಕೆ ಹಾಕುತ್ತಿದ್ದ ಯುವಕನನ್ನು ತಿರುಪತಿ ಜಿಲ್ಲೆಯ ಅಲಿಪಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ:
ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ, ಬಳಿಕ ಆಕೆಯೊಂದಿಗೆ ಆಪ್ತವಾಗಿದ್ದನು. ಇತ್ತೀಚೆಗೆ ಯುವತಿಯನ್ನು ತಿರುಪತಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದನು. ಆ ಬಳಿಕ ಯುವತಿಯು ಮದುವೆಯ ವಿಚಾರ ಪ್ರಸ್ತಾಪಿಸಿದಾಗ, ತನ್ನ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಮದುವೆಯಾಗುವುದಾಗಿ ಶರತ್ತು ವಿಧಿಸಿದ್ದನು. ಯುವತಿ ಇದಕ್ಕೆ ಸಾರಾಸಗಟಾಗಿ ನಿರಾಕರಿಸಿದಾಗ, ಇಬ್ಬರೂ ಒಟ್ಟಿಗಿದ್ದ ಕ್ಷಣಗಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದನು.
ಹೈದರಾಬಾದ್ನಲ್ಲಿ ಆರೋಪಿ ಸೆರೆ:
ಆರೋಪಿಯ ಬೆದರಿಕೆಯಿಂದ ಕಂಗೆಟ್ಟ ಸಂತ್ರಸ್ತೆ ಅಲಿಪಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿರುಪತಿ ಜಿಲ್ಲಾ ಎಸ್ಪಿಯವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ, ಹೈದರಾಬಾದ್ನ ಮಲಕ್ಪೇಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿರುವ ಡಿಜಿಟಲ್ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಯುತ್ತಿದೆ.
ವಿದ್ಯಾರ್ಥಿಗಳಿಗೆ ಪೊಲೀಸರ ಜಾಗೃತಿ ಹಾಗೂ ಎಚ್ಚರಿಕೆ:
ವಿದೇಶಗಳಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಆಗುವ ಪರಿಚಯಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ತುರ್ತು ಸಹಾಯಕ್ಕಾಗಿ 112 ಹಾಗೂ ಸೈಬರ್ ಅಪರಾಧಗಳ ದೂರಿಗೆ 1930 ಸಹಾಯವಾಣಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
- 1930 ಸಹಾಯವಾಣಿ
- Alipiri police arrest
- cyber crime helpline 1930
- Forced Religious Conversion
- Georgia medical student
- Hyderabad Malakpet arrest
- MBBS student blackmail case
- online marriage fraud
- private video viral threat
- Tirupati crime news
- ಅಲಿಪಿರಿ ಪೊಲೀಸ್ ಠಾಣೆ
- ಆನ್ಲೈನ್ ವಂಚನೆ
- ಎಂ ಬಿ ಬಿ ಎಸ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ
- ಖಾಸಗಿ ವಿಡಿಯೋ ಬ್ಲ್ಯಾಕ್ಮೇಲ್
- ಜಾರ್ಜಿಯಾ ಎಂಬಿಬಿಎಸ್
- ತಿರುಪತಿ ಕ್ರೈಮ್ ನ್ಯೂಸ್
- ಮತಾಂತರ ಬೆದರಿಕೆ
- ಸೈಬರ್ ಕ್ರೈಮ್
- ಹೈದರಾಬಾದ್ ಬಂಧನ





Leave a comment