ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಪ್ರೀತಿ” ಕೊಂದ ಕೊಲೆಗಾರ! ಪ್ರೀತಿಸುತ್ತಿದ್ದವನಿಗೆ ಸರ್ವಸ್ವ ಕೊಟ್ಟ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

On: November 29, 2024 7:43 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-11-2024

ಮಂಗಳೂರು: ಹದಿಹರೆಯದಲ್ಲಿ ಪ್ರೀತಿ ಬಲೆಗೆ ಬೀಳುವುದು ಸಾಮಾನ್ಯ ಎಂಬಂತಾಗಿದೆ. ಮಾತ್ರವಲ್ಲ, ಇನ್ನೂ ಹದಿನೆಂಟು ವರ್ಷ ದಾಟಿರುವುದಿಲ್ಲ. ಅಷ್ಟರೊಳಗೆ ಪ್ರೀತಿಯ ಬಲೆಗೆ ಬೀಳುವ ಅಪ್ರಾಪ್ತ ಬಾಲಕಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರೀತಿ ಮಾಡುವಾಗ ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಎನ್ನುವವರು ಸ್ವಲ್ಪ ಏರುಪೇರಾದರೂ ಮಸಣ ಸೇರುವುದು ಖಚಿತ. ಇಂಥದ್ದೊಂದು ಲವ್ ಸ್ಟೋರಿ ನಡೆದಿರುವುದು ಬೆಳ್ತಂಗಡಿ ತಾಲೂಕಿನಲ್ಲಿ.

ಹೌದು. ಪ್ರೀತಿ ಮಾಡುತ್ತಿದ್ದ ಯುವಕನ ಜೊತೆ ಸುತ್ತಾಡಿ, ಆತನ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ಬಾಲಕಿಯು ಪ್ರಿಯಕರನ ಮೋಸದ ಜಾಲಕ್ಕೆ ಸಿಲುಕಿ ಇಹಲೋಕವನ್ನೇ ತ್ಯಜಿಸಿದ್ದಾಳೆ. ಪ್ರಿಯತಮನ ಮಾತಿಗೆ ಮರುಳಾಗಿ
ಲವ್, ಸೆಕ್ಸ್, ದೋಖಾ ಆದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ಹಿನ್ನೆಲೆ:

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸಂಬಂಧಿ ಪ್ರವೀಣ್ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು. ಮದುವೆ ಆಗುವುದಾಗಿ ನಂಬಿಸಿದ್ದ ಪ್ರವೀಣ್ ಆಕೆ ಜೊತೆಗೆ ಎಲ್ಲೆಡೆ ಸುತ್ತಾಡಿದ್ದಾನೆ. ಆಕೆ ಜೊತೆ ದೈಹಿಕವಾಗಿ ಸಂಪರ್ಕ ಬೆಳೆಸಿದ್ದಾನೆ. ಬಾಲಕಿ ನವೆಂಬರ್ 20 ರಂದು ಇಲಿ ಪಾಷಾಣ ಸೇವಿಸಿದ್ದಳು. ಆದ್ರೆ, ಗುರುವಾರ ಸಾವನ್ನಪ್ಪಿದ್ದಾಳೆ. ಹುಡುಗಿ ಮತ್ತು ಪ್ರವೀಣ್ ಸಂಬಂಧದಲ್ಲಿದ್ದರು, ಆದರೆ ಅವನು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರಿಂದ ಸಹಜವಾಗಿಯೇ ಬಾಲಕಿ ಆತನೊಂದಿಗೆ ಎಲ್ಲಾ ರೀತಿಯಲ್ಲಿಯೂ ಸಂಬಂಧ ಇಟ್ಟುಕೊಂಡಿದ್ದಳು.

ಚಾರ್ಮಾಡಿ ನಿವಾಸಿ ಪ್ರವೀಣ್ ಎಂಬಾತನಿಗೆ ಬಾಲಕಿ ತಾಯಿ ಕರೆದು ಬುದ್ದಿವಾದ ಹೇಳಿದ್ದಾರೆ. ಜೊತೆಗೆ ಮದುವೆ ವಯಸ್ಸು ಬಂದ ಬಳಿಕ ಮದುವೆ ಮಾಡಿಕೊಡುವುದಾಗಿಯೂ ಹೇಳಿದ್ದಾರೆ. ಜೊತೆಗೆ ಓಡಾಡಲು ಬಿಟ್ಟಿದ್ದಾರೆ. ಆದ್ರೆ, ಇದನ್ನೇ ದುರುಪಯೋಗಪಡಿಸಿಕೊಂಡ ಪ್ರವೀಣ್ ಆಕೆ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿ ಎಂಜಾಯ್ ಮಾಡಿದ ಬಳಿಕ ಲವ್ ಬ್ರೇಕ್ ಅಪ್ ಮಾಡೋಣ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಬಾಲಕಿ ಆತಂಕಕ್ಕೆ ಒಳಗಾಗಿದ್ದಾಳೆ. ಇಲಿ ಪಾಷಾಣ ಕುಡಿದು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಸುಮಾರು ಒಂದು ವಾರದವರೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದರೂ ಅಂತಿಮವಾಗಿ ಕೊನೆಯುಸಿರೆಳೆದಿದ್ದಾಳೆ.

ಬಾಲಕಿಯ ಪೋಷಕರು ಪ್ರವೀಣ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರವೀಣ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಚಾರ್ಮಾಡಿ ನಿವಾಸಿ ಪ್ರವೀಣ್ ಎಂಬಾತ ಮದುವೆ ನೆಪದಲ್ಲಿ ಬಾಲಕಿಯೊಂದಿಗೆ ಲೈಗಿಕ ಸಂಬಂಧ ಹೊಂದಿದ್ದನಾದರೂ ಮದುವೆ ಆಗುತ್ತೇನೆಂದು ಹೇಳಿ ಮೋಸ ಮಡಿದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿದ್ದಾಳೆಂದು ಆಕೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು,ಬಾಲಕಿಗೆ ಪ್ರವೀಣನು ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ದಾನೆ. ಪ್ರವೀಣ್​ಗೆ ಯಾಕೋ ಈಕೆಗೆ ಜೊತೆಗಿನ ಸಾಂಗತ್ಯ ಬೇಡ ಎನಿಸಿದೆ. ದೂರ ಆಗೋಣ ಎಂದಿದ್ದಾನೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ
ಪ್ರವೀಣ ಕೈ ಕೊಡುತ್ತಿರೋದನ್ನು ಸಹಿಸಲಾಗದೆ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರವೀಣ್ ತನ್ನನ್ನು ಬಳಸಿಕೊಂಡಿರುವುದಾಗಿಯೂ, ತನಗೆ ಮೋಸ ಮಾಡಿದ್ದಾಗಿಯೂ, ಗರ್ಭ ನಿರೋಧಕ ಮಾತ್ರೆ ನೀಡಿದ್ದಾಗಿಯೂ ತಾಯಿಯ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರವೀಣ್ ತಲೆಮರೆಸಿಕೊಂಡಿದ್ದಾನೆ. ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment