SUDDIKSHANA KANNADA NEWS/DAVANAGERE/DATE:08_12_2025
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ತನ್ನ ಗಾಯನದ ಮೂಲಕ ಎಲ್ಲರ ಮನ ಗೆದ್ದಿದ್ದ ಸುಹಾನಾ ಸೈಯದ್ ಶಿವಮೊಗ್ಗ ಮೂಲದವರು. ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದವರು. ಮಾತ್ರವಲ್ಲ, ಗಾಯನದ ವೇಳೆ ವಿರೋಧವನ್ನೂ ಎದುರಿಸಿದ್ದವರು. ಅಂತಹುದರಲ್ಲಿ ಹಿಂದೂ ಯುವಕನ ಮನ ಗೆದ್ದು ವರಿಸಿದ್ದು ಸುಲಭವೇನಲ್ಲ.
ಆದರೆ, ಈಗ ಸುಹಾನಾ ಸೈಯದ್ ತನ್ನ ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಮಾತ್ರವಲ್ಲ, ತಾನು ಹೊತ್ತಿದ್ದ ಹರಕೆಯನ್ನೂ ತೀರಿಸಿದ್ದಾರೆ.
ಪೋಸ್ಟ್ ನಲ್ಲೇನಿದೆ?
ನಾನು ಮಂತ್ರಾಲಯಕ್ಕೆ ಬಂದ ಕೂಡಲೇ ನಮ್ಮಿಬ್ಬರ ಕುಟುಂಬಗಳ ಆಶೀರ್ವಾದದೊಂದಿಗೆ ನಮ್ಮ ಮದುವೆ ನಡೆಯಲಿ ಎಂದು ಒಂದು ಪವಾಡಕ್ಕಾಗಿ ಪ್ರಾರ್ಥಿಸಿದ್ದೆ. ಅದು ಈಡೇರಿದೆ. ಒಂದು ದಿನ ನಾನು ನಿತಿನ್ ಜೊತೆ ಇಲ್ಲಿಗೆ ಹಿಂತಿರುಗುತ್ತೇನೆ ಎಂದು ಆಶಿಸುತ್ತಾ ನಾನು ಯಾವಾಗಲೂ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಡುತ್ತಿದ್ದೆ.
ಆದರೆ ಇಂದು ಇಂದು… ನಾವಿಬ್ಬರೂ ಇದ್ದೇವೆ. ವಿವಾಹಿತರು, ಆಶೀರ್ವಾದ ಪಡೆದವರು ಮತ್ತು ಒಟ್ಟಿಗೆ ಇದ್ದೇವೆ. ಅನುಗ್ರಹಿಸಿದ ರಾಘವೇಂದ್ರ ಸ್ವಾಮಿಗಳಿಗೆ ನಾವು ಪ್ರಾರ್ಥನೆ ಪದಗಳಿಗೆ ಮೀರಿ ಕೃತಜ್ಞರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.





Leave a comment