SUDDIKSHANA KANNADA NEWS/ DAVANAGERE/DATE:24_09_2025
ದಾವಣಗೆರೆ: ವ್ಯಕ್ತಿಯೊಬ್ಬ ನಾನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆಪ್ತ ಸಹಾಯಕ ಎಂದು ಹೇಳಿಕೊಂಡು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ಕರೆ ಮಾಡಿ ವಂಚಿಸಿದ ಖತರ್ನಾಕ್ ವ್ಯಕ್ತಿಯನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ದೇವಮಾನವ ಸ್ವಾಮಿ ಕಾ*ಮಪುರಾಣದ ಹಿಸ್ಟರಿಯೇ ಭಯಾನಕ: ದೇಶದಿಂದ ಎಸ್ಕೇಪ್ ಆಗದಂತೆ ಲುಕ್ ಔಟ್ ನೊಟೀಸ್ ಜಾರಿ!
ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು ನೀಡಿದ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.86/25 ರಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ನಗರ ಉಪಾಧೀಕ್ಷಕ ಶರಣಬಸವೇಶ್ವರ ಬಿ. ಮತ್ತು ವೃತ್ತ ನಿರೀಕ್ಷಕ ಬಾಲಚಂದ್ರ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ವಂಚಿಸಿದ ಆರೋಪಿಯನ್ನು ಗಾಂಧಿನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿನಾಯ್ಕ್ ಹಾಗೂ ಸಿಬ್ಬಂದಿಯವರು ತಂಡವು ಆರೋಪಿತನ ಪತ್ತೆ ಮಾಡಿದೆ.
ಸರ್ಕಾರಿ ಅಧಿಕಾರಿ ಹಾಗೂ ಆಪ್ತ ಸಹಾಯಕರ ಸೋಗಿನಲ್ಲಿ ನಟಿಸಿ ಜಿಲ್ಲಾಧಿಕಾರಿಗಳಿಗೆ ವಂಚಿಸಿದ್ದ ಆರೋಪಿತನಾದ ಮೂರ್ತಿ ಅಲಿಯಾಸ್ ಅಭಿಷೇಕ್ ದೊಡ್ಡಮನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.