SUDDIKSHANA KANNADA NEWS/ DAVANAGERE/ DATE:12-12-2023
ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಬ್ರೇಕ್ ಬಿದ್ದಿದೆ. ಆರಂಭದ ವಹಿವಾಟಿನ ಮಧ್ಯೆ ನಿಫ್ಟಿ ಸೂಚ್ಯಂಕ ಹೊಸ ಎತ್ತರವಾದ 21,037.90 ತಲುಪಿತು. ತದನಂತರ ಲಾಭಾಂಶ ಹಿಂತೆಗೆತದ ಕಾರಣದಿಂದಾಗಿ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. ಅಂತಿಮವಾಗಿ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -90.70 (-0.43%)
ಅಂಕ ಇಳಿಕೆ ಕಂಡು 20,906.40 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -377.50 (-0.53%) ಇಳಿಕೆ ಕಂಡು 69,551.03 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ HDFCLIFE, ULTRACEMCO, BAJAJ-AUTO, SBILIFE, AXISBANK ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ APOLLOHOSP, SUNPHARMA,MARUTI, COALINDIA, EICHERMOT ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.38 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.76.86 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.1,923.32 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.