ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

STOCK MARKET: ಏರಿಕೆ ಕಂಡ ಭಾರತೀಯ ಷೇರುಪೇಟೆ: ಇಳಿಕೆ ಕಂಡ ಮಿಡ್ ಕ್ಯಾಪ್ ಷೇರುಗಳು

On: February 9, 2024 9:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-02-2024

ಇಂದು ಧನಾತ್ಮಕವಾಗಿ ಆರಂಭಗೊಂಡ ಭಾರತೀಯ ಷೇರುಪೇಟೆ ಮಧ್ಯಾನದ ನಂತರದ ವಹಿವಾಟಿನಲ್ಲಿ ದಿಢೀರ್ ಇಳಿಕೆ ಕಂಡಿತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳಲ್ಲಿ ಲಾಭಾಂಶ ಹಿಂತೆಗೆತದ ಕಾರಣದಿಂದಾಗಿ ಷೇರುಗಳು ಹೆಚ್ಚು ಮಾರಾಟದ ಒತ್ತಡಕ್ಕೆ ಒಳಗಾಯಿತು.ಅಂತಿಮವಾಗಿ ಸೂಚ್ಯಂಕಗಳು ಧನಾತ್ಮಕವಾಗಿ ಅಂತ್ಯ ಕಂಡಿವೆ.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 64.55 (0.30%)
ಅಂಕ ಏರಿಕೆ ಕಂಡು 21,782.50 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 167.06 (0.23%) ಅಂಕ ಏರಿಕೆ ಕಂಡು 71,595.49 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು

ನಿಫ್ಟಿಯಲ್ಲಿ GRASIM, SBIN, APOLLOHOSP, SUNPHARMA, ICICIBANK ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು

ನಿಫ್ಟಿಯಲ್ಲಿ M&M, BHARTIARTL, NTPC, ONGC, TATASTEEL ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

FII ಮತ್ತು DII ನಗದು ವಹಿವಾಟು ವಿವರ

ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.141.95 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.-421.87 ಕೋಟಿ ನಿವ್ವಳ ಮಾರಾಟ ಮಾಡಿದ್ದಾರೆ.

ಕರೆನ್ಸಿ ವಹಿವಾಟು

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.04 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

ಗಿರೀಶ್ ಕೆ ಎಂ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment