SUDDIKSHANA KANNADA NEWS/ DAVANAGERE/ DATE:14-02-2024
ಆರಂಭದಲ್ಲೇ ನಕಾರಾತ್ಮಕವಾಗಿ ಆರಂಭಗೊಂಡ ಭಾರತೀಯ ಷೇರುಪೇಟೆ ತದನಂತರ ಚೇತರಿಕೆ ಕಂಡು, ಏರಿಕೆಯತ್ತ ಸಾಗಿತು. ಅಮೆರಿಕದ ಹಣದುಬ್ಬರ ಅಂದಾಜಿಸಿದಕ್ಕಿಂತಲೂ ಹೆಚ್ಚಿಗೆ (0.3%) ಬಂದ ಕಾರಣ ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆ ನಕಾರಾತ್ಮಕವಾಗಿ ಆರಂಭಗೊಂಡಿತು. ಮಿಡ್ ಕ್ಯಾಪ್ ಮತ್ತು ಸರ್ಕಾರಿ ವಲಯದ ಬ್ಯಾಂಕ್, ಆಯಿಲ್ ವಲಯದ ಷೇರುಗಳಲ್ಲಿ ಏರಿಕೆ ಕಂಡುಬಂದಿತು. ಅಂತಿಮವಾಗಿ ಸೂಚ್ಯಂಕಗಳು ಧನಾತ್ಮಕವಾಗಿ ಅಂತ್ಯ ಕಂಡಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 96.80 (0.45%)
ಅಂಕ ಏರಿಕೆ ಕಂಡು 21,840.05 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 267.64 (0.37%) ಅಂಕ ಏರಿಕೆ ಕಂಡು 71,822.83 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ BPCL, SBIN, ONGC, COALINDIA, TATASTEEL ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ TECHM, CIPLA, DRREDDY, INFY, TCS ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
FII ಮತ್ತು DII ನಗದು ವಹಿವಾಟು ವಿವರ
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-3,929.60 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.2,897.98 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.03 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.