SUDDIKSHANA KANNADA NEWS/ DAVANAGERE/ DATE_12-07_2025
ದಾವಣಗೆರೆ: 30 ಸಾವಿರ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದರೆ ಸಮಸ್ಯೆಗೆ ಪರಿಹಾರ ಮಾಡಲು ರಾಜ್ಯ ಸರ್ಕಾರ ಪ್ರಯತ್ನವನ್ನು ಸಹ ಮಾಡುತ್ತಿಲ್ಲ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಆರೋಪಿಸಿದ್ದಾರೆ.
Read Also This Story: ಡಾ. ಜಿ. ಎಂ. ಸಿದ್ದೇಶ್ವರರ 74ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ ಪತ್ರ!
ಅನಿರ್ದಿಷ್ಟಾವಧಿಯವರೆಗೆ ನಡೆಯುತ್ತಿರುವ ನೌಕರರ ಹೋರಾಟ ಮುಂದುವರೆದಲ್ಲಿ ಪಾಲಿಕೆಗಳ ವ್ಯಾಪ್ತಿಯ ನಗರಗಳ ಸ್ಥಿತಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಅಸ್ತವ್ಯಸ್ತಗೊಳ್ಳಲಿದೆ. ಸ್ವಚ್ಛತೆ ಸೇರಿದಂತೆ ದೈನಂದಿನ ಮೂಲಭೂತ ಸೌಕರ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತಾತ್ಮಕ ಸೇವೆ ದೊರೆಯದೇ ಜನ ಸಂಕಷ್ಟಕ್ಕೀಡಾಗಲಿದ್ದಾರೆ. ಈಗಾಗಲೇ ಮುಷ್ಕರ ವ್ಯಾಪ್ತಿಯ ನಗರಗಳ ನಾಗರಿಕರಿಗೆ ಬಿಸಿ ತಟ್ಟುತ್ತಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಬಡದಾಟದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಸಾಗದೇ ಜನಸಾಮಾನ್ಯರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳೂ ಕೂಡ ಸ್ಥಗಿತಗೊಂಡರೆ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುವುದರಲ್ಲಿ ಅನುಮಾನವಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮೊದಲು ನಗರ ಪಾಲಿಕೆ ನೌಕರರ ಬೇಡಿಕೆ ಈಡೇರಿಸಿ ನೌಕರರ ನ್ಯಾಯಯುತ
ಬೇಡಿಕೆಗೆ ಈ ಕೂಡಲೇ ಸರ್ಕಾರ ಸ್ಪಂದಿಸಿ ಮುಷ್ಕರ ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳು ಆದೇಶ ನೀಡಬೇಕು ಎಂದು ಶಿವನಗೌಡ ಟಿ. ಪಾಟೀಲ್ ಒತ್ತಾಯಿಸಿದ್ದಾರೆ.