SUDDIKSHANA KANNADA NEWS/ DAVANAGERE/ DATE:09-03-2025
ಹೈದರಾಬಾದ್: ಬಾಲಕಿಯರ ಹಾಸ್ಟೆಲ್‌ನಲ್ಲಿ ಫೋನ್ ಚಾರ್ಜರ್‌ಗಳಲ್ಲಿ ಗುಪ್ತ ಕ್ಯಾಮೆರಾಗಳು ಪತ್ತೆಯಾದ ನಂತರ ಸಂಗರೆಡ್ಡಿ ಜಿಲ್ಲೆಯಲ್ಲಿ ಪೊಲೀಸರು ಹಾಸ್ಟೆಲ್ ವಾರ್ಡನ್ ಅನ್ನು ಬಂಧಿಸಿದ್ದಾರೆ.
ವಿಧಿವಿಜ್ಞಾನ ತಂಡಗಳು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ ಮತ್ತು ತನಿಖೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫೋನ್ ಚಾರ್ಜರ್‌ಗಳ ಒಳಗೆ ಅಡಗಿಸಿಟ್ಟ ಕ್ಯಾಮೆರಾಗಳು ಪತ್ತೆಯಾಗಿವೆ. ಪೊಲೀಸರು ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಪರಿಶೀಲನೆ ನಡೆಯುತ್ತಿದೆ.
ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಅಮೀನ್‌ಪುರ ಪುರಸಭೆಯ ವ್ಯಾಪ್ತಿಯ ಕಿಸ್ತರೆಡ್ಡಿಪೇಟೆಯಲ್ಲಿರುವ ಖಾಸಗಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಸ್ಪೈ ಕ್ಯಾಮೆರಾ ಪತ್ತೆಯಾಗಿದೆ. ಫೋನ್ ಚಾರ್ಜರ್‌ಗಳ ಒಳಗೆ ಅಡಗಿಸಿಟ್ಟ ಕ್ಯಾಮೆರಾಗಳನ್ನು ವಿದ್ಯಾರ್ಥಿನಿಯರು ಪತ್ತೆ ಹಚ್ಚಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹಾಸ್ಟೆಲ್ ವಾರ್ಡನ್ ಮಹೇಶ್ವರ್ ನನ್ನು ಬಂಧಿಸಲಾಗಿದೆ.