SUDDIKSHANA KANNADA NEWS/ DAVANAGERE/ DATE:13-04-2025
ದಾವಣಗೆರೆ: ಪ್ರಚೋದನಾಕಾರಿ ವಿಡಿಯೋ, ಸಂದೇಶ, ಫೋಟೋ ಹರಿಬಿಡುವುದಕ್ಕೆ ಕಡಿವಾಣ ಹಾಕಲು ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಈ ವಿಚಾರ ಸಂಬಂಧ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದೆ.
ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ ಗಳನ್ನು ಹಾಕಬಾರದು
ಎಂದು ಸೂಚನೆ ನೀಡಿದೆ.
ವಿಶೇಷವಾಗಿ ವಕ್ಷ್ ಬಿಲ್ ಸಂಬಂಧಿಸಿದಂತೆ ಹಾಗೂ ಇತ್ಯಾದಿ ಅಕ್ಷೇಪರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ಶೇರ್ ಮಾಡುವುದು, ಕೆಟ್ಟದಾಗಿ ಕಾಮೇಂಟ್ ಮಾಡುವುದು ಕಾನೂನಿಗೆ ಬಾಹಿರ. ಇಂಥ ಪೋಸ್ಟ್ ಗಳನ್ನು ಮಾಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲಾತಾಣಗಳ ಬಳಕೆಯಲ್ಲಿರಲಿ ಎಚ್ಚರ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಾರ್ನಿಂಗ್ ನೀಡಿದ್ದಾರೆ.