ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಯಲ್ಲಿ ಮನೆ ಬಾಗಿಲಿಗೆ ರಾತ್ರಿ ಬಂದ ಎಸ್ಪಿ ಉಮಾ ಪ್ರಶಾಂತ್: ಆಮೇಲೇನಾಯ್ತು?

On: July 22, 2025 10:45 PM
Follow Us:
ದಾವಣಗೆರೆ
---Advertisement---

ದಾವಣಗೆರೆ: ದಾವಣಗೆರೆ (Davanagere) ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ಎರೆಗುಂಟಿ ಗ್ರಾಮದ ವಿವಿಧ ಮನೆಗಗಳಿಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಜಾಗೃತಿಗಾಗಿ ಹಾಗೂ ಠಾಣೆಯ ಬೀಟ್ ಸಿಬ್ಬಂದಿಗಳು ತಮ್ಮ ತಮ್ಮ ಬೀಟ್ ನಲ್ಲಿರುವ ಮೆನೆಗಳಿಗೆ ಬೇಟಿ ನೀಡಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ತಿಳಿಸುವ ಕಾರ್ಯ ಮಾಡಿದ್ರು. ಪರಿಶೀಲನೆಗಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿದರು.

ಈ ಸುದ್ದಿಯನ್ನೂ ಓದಿ: EXCLUSIVE: ಪಂಚಪೀಠಾಧ್ಯಕ್ಷರ ಶೃಂಗಸಭೆಯಲ್ಲಿ ಜಾತಿಗಣತಿಯಲ್ಲಿ “ವೀರಶೈವ ಲಿಂಗಾಯತ ನಮೂದಿಸಿ” ಎಂಬುದು ಸೇರಿದಂತೆ 12 ನಿರ್ಣಯಗಳ ಅಂಗೀಕಾರ

ಈ ಸಂಧರ್ಭದಲ್ಲಿ ಉಮಾ ಪ್ರಶಾಂತ್ ಅವರು, ಮನೆಗಳ ಹಿರಿಯರು, ಯುವಕರೊಂದಿಗೆ ಸಂವಾದ ನಡೆಸಿದರು. ಸಂಚಾರ ಸಮಸ್ಯೆಗಳು, ಬೆಳಕಿನ ಸಮಸ್ಯೆ, ಬೀಟ್ ವ್ಯವಸ್ಥೆ ಬಗ್ಗೆ, ಮಹಿಳೆಯರ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಕೆಲ ಪುಂಡ ಪೋಕರಿಗಳು ಕುಡಿದು ನಿವಾಸಿಗಳಿಗೆ ತೊಂದರೆ ಮಾಡುತ್ತಿರುವುದು ಗೊತ್ತಾಗಿದೆ. ರಸ್ತೆಯಲ್ಲಿ ವಾಹನಗಳು ವೇಗವಾಗಿ ಓಡಾಡುವ ಬಗ್ಗೆ ಇತರೆ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ್ ಅವರು ಭರವಸೆ ನೀಡಿದರು.

1032 ಸ್ಥಾಯಿ ಸಂಖ್ಯೆ ಅಥವಾ ಸ್ಟ್ಯಾಂಡಿಂಗ್ ಕಾರ್ಡ್ ರಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೀಟ್ ಸೇವೆ ಸಲ್ಲಿಸುತ್ತಿದೆ. ನಾವು ನಿಮ್ಮ ಜಾತಿ ಧರ್ಮ ನಿಮ್ಮ ವಿವಾಹಿತ ಸ್ಥಿತಿಗಳು, ಕೌಟುಂಬಿಕ ಸಮಸ್ಯೆ, ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ. ನಾವು ನಿಮ್ಮ ಕ್ಷೇಮವನ್ನ ವಿಚಾರಿಸಲಿಕ್ಕೆ ಬರುತ್ತೇವೆ. ಪೊಲೀಸ್ ಎಂದರೆ ಭಯವಲ್ಲ ಭರವಸೆ ಎಂದು ತಿಳಿಸಲು ಬರುತ್ತೇವೆ. ಈ ಒಂದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನ ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತರುವಲ್ಲಿ ನೀವೆಲ್ಲರೂ ಕೂಡ ಸಹಕರಿಸಬೇಕು. ಹೆಚ್ಚು ಹೆಚ್ಚು ಬೀಟ್ ಸದಸ್ಯರು ಆಗಿ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಒಂದು ಪ್ರದೇಶದ ಜವಾಬ್ದಾರಿಯುತ ನಾಗರಿಕರು, ಸಾಮಾಜಿಕ ಕಳಕಳಿ ಇರುವ, ಯಾವುದೇ ಸಮಸ್ಯೆಗಳನ್ನು ಪೊಲೀಸರೊಂದಿಗೆ ಚರ್ಚಿಸಿ ಪರಿಹರಿಸಲು ಶ್ರಮಿಸುವವರನ್ನು ಬೀಟ್ ಸದಸ್ಯರನ್ನಾಗಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಕಳಕಳಿಯ ಕಾಳಜಿ ಇರುವಂತವರು ಪೊಲೀಸರ ಜೊತೆಗೆ ಸೇರಿ ಕೆಲಸ ಮಾಡಬೇಕು ಎಂಬ ಇಚ್ಛೆಯುಳ್ಳವರು ಬರಬೇಕು. ದಯವಿಟ್ಟು ನಿಮ್ಮ ಬೀಟ್ ಗ್ರೂಪ್ ನಲ್ಲಿ ನಿಮ್ಮ ಸಮಸ್ಯೆಗಳನ್ನು ತಿಳಿಸಿ. ನಿಮ್ಮ ಹಂತದಲ್ಲಿ ಅಥವಾ ನಮ್ಮ ಸಿಬ್ಬಂದಿಗಳ ಹಂತದಲ್ಲಿ ಸರಿಯಾಗಿ ನಿಮ್ಮ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡಿಲ್ಲವಾದರೆ ಅದನ್ನು ಪರಿಶೀಲಿಸಲು ಇನ್ ಸ್ಪೆಕ್ಟರ್. ಡಿವೈಎಸ್ಪಿ ಮತ್ತು ನಾವಿದ್ದೇವಿ. ಪ್ರತಿಯೊಂದು ಮನೆ ಮುಂದೆ ಸ್ಟಿಕ್ಕರ್ ಅಂಟಿಸುತ್ತೇವೆ ಅದರಲ್ಲಿ 9480803201 ನಂಬರ್ ಇದೆ. ಅಲ್ಲದೆ ERSS 112 ಇದೆ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ದಯವಿಟ್ಟು ನೇರವಾಗಿ ಬೀಟ್ ಗ್ರೂಪ್ ಗೆ ಹಾಕಿ. ಕಾನ್ಫಿಡೆನ್ಶಿಯಲ್ ಮಾಹಿತಿ ಇದ್ದರೆ ಪ್ರತ್ಯೇಕವಾಗಿ ನಿಮ್ಮಬೀಟ್ ಸಿಬ್ಬಂದಿಗೆ ಇನ್ ಸ್ಪೆಕ್ಟರ್ ಅಥವಾ ನಮಗೆ ಕರೆ ಮಾಡಿ ಹೇಳಬಹುದು. ಯಾವುದೇ ರೀತಿಯ ಮಧ್ಯವರ್ತಿ ಬೇಡ. ನಾವು ನಿಮ್ಮ ಮನೆಗೆ ನಿಮ್ಮ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಮಾತ್ರ ಬಿಟ್ಟರೆ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ನಾವು ಬೀಟ್ ಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಮಾಡುವುದರಿಂದ ಪ್ರತಿಯೊಂದು ನಿಮ್ಮ ಪ್ರದೇಶದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಜನರ ಸಮಸ್ಯೆಗಳು, ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳು ಹಿರಿಯ ನಾಗರೀಕರ ಸಮಸ್ಯೆಗಳು ಅಥವಾ ಕಳ್ಳತನ ನಡೆಯುತ್ತಿರುವ ಬಗ್ಗೆ ಅಲ್ಲದೆ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಹೇಳಿಕೊಳ್ಳಿ ನಾವೇ ನಿಮ್ಮಲ್ಲಿಗೆ ಬರುತ್ತೇವೆ ಎಂದರು.

ಹಾಗಾಗಿ ದಯವಿಟ್ಟು ಸಾರ್ವಜನಿಕರಾಗಿ ನಿಮ್ಮಕರ್ತವ್ಯ ಏನೆಂದರೆ ಪೊಲೀಸರೊಂದಿಗೆ ಸಹಕರಿಸುವುದರಿಂದ ಯಾವುದೇ ಅಪರಾಧಗಳು ಆಗದೇ ರೀತಿಯಾಗಿ ನಿಯಂತ್ರಣ ಮಾಡಬಹುದು. ನಿಮಗೆ ಯಾರೋ ಅನುಮಾನಸ್ಪದ ಅಥವಾ ಅಪರಿಚಿತರು ವ್ಯಕ್ತಿಗಳಿದ್ದಲ್ಲಿ ಮಾಹಿತಿ ನೀಡಿ. ಕಮ್ಯುನಿಟಿ ಪೊಲೀಸ್ ನ ಭಾಗವಾಗಿ ನಾವು ಪೊಲೀಸ್ ಮಿತ್ರಪಡೆ ಮಾಡಿದ್ದೇವೆ. ನಗರ ಉಪವಿಭಾಗದ ಪ್ರತಿಯೊಂದು ಏರಿಯಾದಲ್ಲೂ ಐದೈದು ಜನ ಕೈ ಜೋಡಿಸಿದ್ರೆ ಪೊಲೀಸರ ಲಾ ಅಂಡ್ ಆರ್ಡರ್ ಕೆಲಸ, ಬಂದೋಬಸ್ತು, ನೈಟ್ ರೌಂಡ್ಸ್ ನಲ್ಲಿ ನಮ್ಮ ಜೊತೆ ಬಂದು ಕೆಲಸ ಮಾಡಿದರೆ ಪೊಲೀಸರ ಕರ್ತವ್ಯದ ಬಗ್ಗೆ ಅರಿವು ಬರುತ್ತದೆ. ನಮ್ಮ ಜೊತೆಗೆ ಕೆಲಸ ಮಾಡಿದಾಗ ಪೊಲೀಸರ ಮೇಲೆ ನಿಮಗೆ ನಂಬಿಕೆ ಬರುತ್ತದೆ ಎಂದು ಹೇಳಿದರು.

ಎರೆಗುಂಟಿ ಗ್ರಾಮದ ವಿವಿಧ ಮನೆಗೆಗಳಿಗೆ ಗಸ್ತಿನ ಮೂಲಕ ಭೇಟಿ ನೀಡಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ, ಕುಂದುಕೊರತೆಗಳನ್ನು /ಅಹವಾಲುಗಳನ್ನು ಆಲಿಸಿದರು. ನಿಮ್ಮ ನಿಮ್ಮ ಬೀಟ್ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ಯಾವುದೇ ಸಮಸ್ಯಗಳಿದ್ದರೂ ಮಾಹಿತಿ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಗಾಂಧಿ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರವಿನಾಯ್ಕ್ ಹಾಗೂ ಸಿಬ್ಬಂದಿ ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment