Home ಉದ್ಯೋಗ ವಾರ್ತೆ ಡಿಪ್ಲೊಮಾ, ಪದವೀಧರರಿಗೆ ಸುವರ್ಣಾವಕಾಶ: ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ 258 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಡಿಪ್ಲೊಮಾ, ಪದವೀಧರರಿಗೆ ಸುವರ್ಣಾವಕಾಶ: ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ 258 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Share
ರೈಲ್ವೆ
Share

ಹುಬ್ಬಳ್ಳಿ: ನೈಋತ್ಯ ರೈಲ್ವೆ (South Western Railway – SWR) ಜೂನಿಯರ್ ಇಂಜಿನಿಯರ್ (JE) ಹಾಗೂ ಗೂಡ್ಸ್ ಟ್ರೇನ್ ಮ್ಯಾನೇಜರ್ ಸೇರಿದಂತೆ ವಿವಿಧ 258 ಹುದ್ದೆಗಳ ಭರ್ತಿಗೆ ಜನರಲ್ ಡಿಪಾರ್ಟ್‌ಮೆಂಟಲ್ ಕಾಂಪಿಟಿಟಿವ್ ಎಕ್ಸಾಮಿನೇಷನ್ (GDCE) ಅಡಿಯಲ್ಲಿ ಅಧಿಸೂಚನೆ (Advt No. 01/2026) ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026 ರ ನವೆಂಬರ್ 09 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 2026 ರ ಡಿಸೆಂಬರ್ 08 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ rrchubli.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಈ ನೇಮಕಾತಿಯು ನೈಋತ್ಯ ರೈಲ್ವೆಯ ವಿಭಾಗಗಳು, ವರ್ಕ್‌ಶಾಪ್ ಹಾಗೂ ಪ್ರಧಾನ ಕಚೇರಿಗಳಿಗೆ ಸಂಬಂಧಿಸಿದ್ದಾಗಿದೆ.

ಒಟ್ಟು ಹುದ್ದೆಗಳು: 258 (ಗೂಡ್ಸ್ ಟ್ರೇನ್ ಮ್ಯಾನೇಜರ್ – 247, ಜೆಇ/ಬ್ರಿಡ್ಜ್ – 02, ಜೆಇ/ಪಿ.ವೇ – 02, ಜೆಇ/ಮೆಕ್ಯಾನಿಕಲ್ ವರ್ಕ್‌ಶಾಪ್ – 05, ಜೆಇ/ಎಸ್ & ಟಿ/ಸಿಗ್ನಲ್ – 02).

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಪದವಿ (Degree) ಅಥವಾ ಇಂಜಿನಿಯರಿಂಗ್ ಡಿಪ್ಲೊಮಾ (Civil / Mechanical / Electrical / Electronics / IT / CS) ಪೂರ್ಣಗೊಳಿಸಿರಬೇಕು.

ವಯೋಮಿತಿ: ದಿನಾಂಕ 01 ಜನವರಿ 2027 ಕ್ಕೆ ಅನ್ವಯಿಸುವಂತೆ 18 ರಿಂದ 42 ವರ್ಷಗಳು. (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ).

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ (NIL).

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ (Medical Exam) ಮೂಲಕ ಆಯ್ಕೆ ಮಾಡಲಾಗುವುದು. CBT ಯಲ್ಲಿ ತಪ್ಪು ಉತ್ತರಗಳಿಗೆ 1/3 ನೆಗೆಟಿವ್ ಅಂಕಗಳಿರುತ್ತವೆ.

(ಗಮನಿಸಿ: ಈ ನೇಮಕಾತಿಯು ನೈಋತ್ಯ ರೈಲ್ವೆ ಮತ್ತು RWF/YNK ಯಲ್ಲಿ ಸೇವೆಯಲ್ಲಿರುವ ನಿಯಮಿತ ಉದ್ಯೋಗಿಗಳಿಗೆ (GDCE) ಮಾತ್ರ ಅನ್ವಯಿಸುತ್ತದೆ.)

Share

Leave a comment

Leave a Reply

Your email address will not be published. Required fields are marked *

Related Articles