ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೆಲ ಆರ್ ಟಿಐ ಕಾರ್ಯಕರ್ತರಿಂದ ಜನರಿಗೆ ಕಿರುಕುಳ, ಅಧಿಕಾರಿಗಳಿಗೆ ಹಣಕ್ಕೆ ಧಮ್ಕಿ: ಸೂಕ್ತ ಕ್ರಮಕ್ಕೆ ದೂಡಾ ಅಧ್ಯಕ್ಷರ ನೇತೃತ್ವದಲ್ಲೇ ಡಿಸಿಗೆ ಮನವಿ!

On: June 26, 2025 10:49 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-25-06-2025

ದಾವಣಗೆರೆ: ನಗರದ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೆಲವರು ಮಾಹಿತಿ ಹಕ್ಕುದಾರರೆಂದು ಹೇಳಿಕೊಂಡು 30-40 ವರ್ಷಗಳ ಕಾಲ ಹಳೆಯ ಬಿಲ್ಡಿಂಗ್‌ಗಳ ಮಾಹಿತಿ ಕೇಳಿ ಸೆಟ್ ಬ್ಯಾಕ್ ಬಿಟ್ಟಿಲ್ಲ ಎಂದು ಪಾಲಿಕೆ ಅಧಿಕಾರಿಗಳನ್ನು ಕಳುಹಿಸಿ ಹೆದರಿಸಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಇಂತಹ ಕೆಲವು ಮಾಹಿತಿ ಹಕ್ಕುದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು.

ಇಂದು ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ ಕೆಲವು ಮಾಹಿತಿ ಹಕ್ಕುದಾರರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ತಿಳಿಸಿದರು.

ಮಾಹಿತಿ ಹಕ್ಕುದಾರರು ಕಳೆದ 10 ವರ್ಷಗಳಿಂದ ಎಷ್ಟು ಕಟ್ಟಡಗಳ ಮೇಲೆ ಕ್ರಮ ಆಗಿದೆ, ಎಷ್ಟು ಡೆಮಾಲಿಷ್ ಆರ್ಡರ್ ಮಾಡಿಸಿರುತ್ತಾರೆ ಎನ್ನುವ ಮಾಹಿತಿ ಅವರಿಂದ ಪಡೆಯಬೇಕೆಂದು ಹಾಗೂ ಅವರ ವೈಯಕ್ತಿಕ ಹಿನ್ನೆಲೆಯನ್ನು ಸಹ ಪರಿಶೀಲಿಸಬೇಕೆಂದು ಹಾಗೂ ಕಛೇರಿಗಳಲ್ಲಿ ಅಧಿಕಾರಿಗಳನ್ನು ಹೆದರಿಸುತ್ತಾ ಅವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.

ಕೆಲವು ಅಧಿಕಾರಿಗಳು ಸಹ ಇಂತಹವರ ಜೊತೆ ಸೇರಿ ಶಾಮೀಲಾಗಿ ಕೆಲವು ಮಾಹಿತಿಗಳನ್ನು ಅಕ್ರಮವಾಗಿ ನೀಡಿ ಅವರಿಂದ ಹಣ ಪಡೆಯುತ್ತಿದ್ದು. ಇಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಎ.ನಾಗರಾಜ್, ರಹೀಂ ಸಾಬ್, ಗಣೇಶ್ ಹುಲ್ಮನಿ, ಸೋಗಿ ಶಾಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮತ್ತಿತರರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment