ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

63 ಕೌಶಲ್ಯಗಳ ಒಲಂಪಿಕ್ಸ್ ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಿ

On: September 7, 2025 10:18 PM
Follow Us:
ಒಲಂಪಿಕ್
---Advertisement---

SUDDIKSHANA KANNADA NEWS/ DAVANAGERE/DATE:07_09_2025

ದಾವಣಗೆರೆ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ (IndiaSkills-Karnataka ಸ್ಪರ್ಧಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬಹುದು.

READ ALSO THIS STORY: ಐವರಿಂದ ವೃದ್ಧ ದಂಪತಿ ಮೇಲೆ ಹಲ್ಲೆ, ಬಂಗಾರ ಬೆಳ್ಳಿ ದರೋಡೆ: ಬೆಚ್ಚಿಬಿದ್ದ ಕಾಕನೂರು ಗ್ರಾಮ!

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೇಜುಗಳಲ್ಲಿ (ತಾಂತ್ರಿಕ/ತಾಂತ್ರಿಕೇತರ) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ವಿದ್ಯಾರ್ಥಿಗಳು 63 ಕೌಶಲ್ಯಗಳಲ್ಲಿನ ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮೊದಲ 50 ಕೌಶಲ್ಯಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದಿನಾಂಕ:1.01.2004 ರ ನಂತರದಲ್ಲಿ ಜನಿಸಿದವರಾಗಿರಬೇಕು.

ನಂತರ 13 ಕೌಶಲ್ಯಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದಿನಾಂಕ:01.01.2001 ರ ನಂತರದಲ್ಲಿ ಜನಿಸಿದವರಾಗಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು www.skillindiadigital.gov.in ನಲ್ಲಿ ನೋಂದಣಿ ಮಾಡಸಬೇಕು.

ನೋಂದಾಯಿಸುವ ವಿಧಾನ: www.skillindiadigital.gov.in/home ಗೆ ಭೇಟಿ ನೀಡಬಹುದು. indaSkills2025 (ಮೇಲಿನ ಬಲ ಮೂಲೆಯಲ್ಲಿ) ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನೂಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ, ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ, 4 ಅಂಕಿಯ ಖಾತೆ ಪಾಸ್‍ವರ್ಡ್ ರಚಿಸಿ, ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ನೋಂದಣಿ ಸಲ್ಲಿಸಿಬೇಕು.

ಸೆಪ್ಟೆಂಬರ್ 30 ರೊಳಗಾಗಿ http://www.skillindiadiadigital.gov.in ಟಿ ಲಿಂಕ್ ಹಾಗೂ ಕ್ಯೂಆರ್ ಕೋಡ್ ಮೂಲಕ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:9606492216 ಸಂಪರ್ಕಿಸಬಹುದೆಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಾ.ಸಿದ್ದೇಶ್.ಎಸ್ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment