SUDDIKSHANA KANNADA NEWS/ DAVANAGERE/ DATE:06-08-2024
ದಾವಣಗೆರೆ: ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಸಾದರ ಲಿಂಗಾಯತ ಒಕ್ಕೂಟವು ನಡೆಸಿದ ಸಭೆ ಬಳಿಕ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ನಡೆದ ಸಭೆಯಲ್ಲಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ನಡೆಸಿದ ಮುಖಂಡರ ವಿರುದ್ಧವೂ ಸಿಟ್ಟು ಹೊರ ಹಾಕಿದರು. ಸಿರಿಗೆರೆ ಶ್ರೀಗಳಾದ ಶಿವಮೂರ್ತಿ ಶಿವಾಚಾರ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಣಯ ಅಂಗೀಕರಿಸಲಾಗಿದೆ.
ತರಳುಬಾಳು ಪೀಠದ ಪೀಠಾಧಿಪತಿ ಬದಲಾವಣೆಗ ದಾವಣಗೆರೆಯಲ್ಲಿಸಭೆ ಹಿನ್ನಲೆಯಲ್ಲಿ ಸಿರಿಗೆರೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಂದ ಕೌಂಟರ್ ಸಭೆ ನಡೆಯಿತು. ಸಭೆ ನಡೆಸಿದವರಿಗೆ ತಿರುಗೇಟು ನೀಡಲಾಯಿತು.
ಉತ್ತರಾಧಿಕಾರಿ ಆಯ್ಕೆಗೆ ಸಮಿತಿ ಮಾಡದಂತೆ ಕೇಸ್ ಹಾಕಿದ್ದೀರಿ. ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಆಗ್ರಹಿಸಿದವರು ಅವರೇ. ನಾವೇನು ಜನರ ಮತ ಪಡೆದು ಗುರುಗಳಾಗಿಲ್ಲ. ಜನರ ಭಕ್ತಿ ಭಾವದಿಂದ ನಾವು ಗುರುಗಳಾಗಿದ್ದೇವೆ. ಅಧಿಕಾರ ಕಳೆದುಕೊಂಡರೆ ನೀವು ಮಾಜಿ ಆಗುತ್ತೀರಿ, ನಾವು ಆಗಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಗಂಡ ಹೆಂಡತಿ ಸಂಬಂಧ ಇದ್ದಂತೆ. ಗಂಡ ಎಂದಾದರೂ ರಿಟೈರ್ಡ್ ಆಗುತ್ತಾನಾ? ಮಕ್ಕಳಿಗೆ ಜವಬ್ದಾರಿ ಕೊಡುತ್ತಾನೆ. ರೆಸಾರ್ಟ್ ರಾಜಕೀಯ ಕೀಳು ಅಭಿರುಚಿ. ನಮ್ಮೆದುರು ಬರಬೇಕಿತ್ತು. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಬಿ. ಸಿ. ಪಾಟೀಲ್, ರಾಜಣ್ಣಗೆ ಖಾಸಗಿ ಭೇಟಿಗೆ ಅವಕಾಶ ಕೊಡಲ್ಲ. ನಾವು ಕರೆಯಲ್ಲ, ತಾಕತ್ತಿದ್ದರೆ ಬರಲಿ. ಬಿ ಸಿ ಪಾಟೀಲ್ ಮಂತ್ರಿ ಆಗೋಕೆ ಮುಂಚೆ ಇಲ್ಲಿಗೆ ಬಂದಿದ್ದನು. ಗುರುಗಳ ಆಶೀರ್ವಾದದಿಂದ ಮಂತ್ರಿ ಆಗಿದ್ದೇನೆಂದಿದ್ದನು. ಈಗೇಕೆ ಹೀಗೆ ಹೇಳಿದ ಬಿ ಸಿ ಪಾಟೀಲ್? ಇಷ್ಟು ದಿನ ಗೌರವ ಕೊಟ್ಟುಕೊಂಡು ಬಂದಿದ್ದೇವೆ. ಇವರು ಯಾರೂ ನಮ್ಮ ಪಟ್ಟಾಭಿಷೇಕಕ್ಕೆ ಬಿಡಿಗಾಸು ಕೊಟ್ಟಿಲ್ಲ ಎಂದು ಕಿಡಿಕಾರಿದರು.
ದೊಡ್ಡ ಗುರುಗಳು ಚಾಂಡಾಲ ಚೌಕುಳಿ ಎಂದು ಬರೆದಿದ್ದಾರೆ ಅವರಿಗಾದ ಅನುಭವಗಳು ನಮಗೂ ಆಗುತ್ತಿವೆ. ಮಠದಲ್ಲಿ ರೌಡಿ, ಗುಂಡಾಗಳನ್ನು ಸಾಕಿದ್ದೇವೆ ಎಂದು ಹೇಳಿದ್ದಾರೆ. ಚಿತ್ರದುರ್ಗ, ದಾವಣಗೆರೆ ಎಸ್ಪಿ ಕರೆದುಕೊಂಡು ಬನ್ನಿ. ಬಂಧಿಸಿ
ಕರೆದೊಯ್ಯಲು ನಮ್ಮ ಅನುಮತಿ ಇದೆ . ಎಲುಬಿಲ್ಲದ ನಾಲಿಗೆ ಹೀಗೆ ಮಾತಾಡಿದರೆ ಏನರ್ಥ ಎಂದು ಕಿಡಿಕಾರಿದರು.