SUDDIKSHANA KANNADA NEWS/ DAVANAGERE/ DATE:25-10-2023
ಬೆಂಗಳೂರು: ರಾಜ್ಯದಲ್ಲಿ ಈಗ ವಿದ್ಯುತ್ ತೊಂದರೆ ಆಗಿದ್ದರೆ ಬಿಜೆಪಿಯೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ನೇರ ಆರೋಪ ಮಾಡಿದ್ದಾರೆ.
Read Also This Story:
Bangalore: ಯಾರು ನನ್ನನ್ನು ವೇಗವಾಗಿ ತುಂಬಿಸುತ್ತಾರೋ, ಅವರಿಗೆ ನನ್ನ ಈ ಕುರ್ಚಿ ಮೀಸಲು”.ಬಿಜೆಪಿ ವ್ಯಂಗ್ಯ
ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಜನರು ಸಂಕಷ್ಟದಲ್ಲಿದ್ದಾರೆ. 16 ಸಾವಿರ ಮೆಗಾವ್ಯಾಟ್ ಉತ್ಪಾದನೆ ನಾವು ಮಾಡಿದ್ದೇವೆ. ಸೌರ ವಿದ್ಯುತ್ ನಾವೇ ಮಾಡಿದ್ದೇವೆ. ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಏನ್ ಮಾಡಿದರೆ ಅಂತಾ ಹೇಳ್ತಾರೆ. ಮೂರುವರೆ ವರ್ಷ ಅಧಿಕಾರ ನಡೆಸಿದ ಅವರು ಏನು ಮಾಡಿದ್ದಾರೆ. ಸಾಲ ಮಾಡಿ ಹೋಗಿ ಆರ್ಥಿಕವಾಗಿ ದಿವಾಳಿ ಮಾಡಿ ಹೋಗಿದ್ದಾರೆ. ಕೆಲಸ ಮಾಡಿ ಟೆಂಡರ್ ಕರೆದು ಪೆಂಡಿಂಗ್ 30 ಸಾವಿರ ಕೋಟಿ ರೂಪಾಯಿ ಬಾಕಿ ಬಿಲ್ ಇದೆ. ಇದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.
ಸುಳ್ಳು ಆರೋಪ ಮಾಡುವುದರಲ್ಲಿ ಭಾರತೀಯ ಜನತಾ ಪಕ್ಷದವರು ನಿಸ್ಸೀಮರು. ಬಿಜೆಪಿಯವರಿಗೆ ಮಾನ, ಮರ್ಯಾದೆ ಇದೆಯೇನ್ರೀ. ಆಪರೇಷನ್ ಕಮಲ ಮಾಡಿ 20 ರಿಂದ 25 ಕೋಟಿ ರೂಪಾಯಿ ಖರ್ಚು ಮಾಡಿ ಉಪಚುನಾವಣೆ ಮಾಡಿದ್ರು. ಆ ದುಡ್ಡು ಎಲ್ಲಿಂದ ಬಂತು? ಅದನ್ನು ಹೇಳಬೇಕಲ್ವಾ. ಆರ್ಥಿಕವಾಗಿ ಕರ್ನಾಟಕ ದಿವಾಳಿ ಆಗಿದ್ದು ಬಿಜೆಪಿಯವರು. 5 ವರ್ಷದಿಂದ ಒಂದು ಮೆಗಾವ್ಯಾಟ್ ಉತ್ಪಾದನೆ ಮಾಡಿಲ್ಲ. ನಮ್ಮ ಕಾಲದಲ್ಲಿ ಈ ರೀತಿಯು ಇತ್ತಾ. ಆರ್ಥಿಕ ಪರಿಸ್ಥಿತಿ? ನಮ್ಮ ಕಾಲದಲ್ಲಿ ಹೇಗಿತ್ತು? ಅವರ ಕಾಲದಲ್ಲಿ ಹೇಗಿತ್ತು ಎಂಬ ಬಗ್ಗೆ ಶ್ವೇತಪತ್ರ ಇಡುತ್ತೇನೆ. ಜನರು ತಿರಸ್ಕಾರ ಮಾಡಿದ್ದಾರೆ. ರಾಜ್ಯವನ್ನು ಲೂಟಿ ಮಾಡಿದರು. ಅವ್ರು ನಮ್ಮ ಬಗ್ಗೆ ಆರೋಪ ಮಾಡುವುದು ಸುಳ್ಳು. ಕಪೋಲಕಲ್ಪಿತ, ಸುಳ್ಳು ಆರೋಪ ಎಂದು ಸ್ಪಷ್ಟನೆ ನೀಡಿದರು.
ಒಂದು ಹೊರಗಡೆಯಿಂದ ವಿದ್ಯುತ್ ಖರೀದಿ, ಎಲ್ಲಾ ಸಕ್ಕರೆ ಕಾರ್ಖಾನೆಗಳು ವಿದ್ಯುತ್ ನೀಡುತ್ತವೆ. ಅದನ್ನು ಖರೀದಿ ಮಾಡಲಾಗುವುದು. ವಿದ್ಯುತ್ ಉತ್ಪಾದನೆಯನ್ನು ಮೊದಲು ಕರ್ನಾಟಕಕ್ಕೆ ನೀಡಬೇಕು. ಖಾಸಗಿಯಾಗಿ ಉತ್ಪಾದನೆ ಮಾಡುವವರು ನಮಗೆ ನೀಡಬೇಕು ಎಂಬ ಆದೇಶ ಮಾಡುತ್ತೇನೆ. ಕೃತಕ ಅಭಾವ ಎಂದು ಮಾಜಿ ಸಿಎಂ ಕುಮಾರಸ್ವಾಮಿ ನಡೆಸಿದವರು. ಎರಡೂ ಬಾರಿ ಸಿಎಂ ಆಗಿದ್ದವರು. ಸತ್ಯ ಮುಚ್ಚಿಟ್ಟು ಸುಳ್ಳು ಹೇಳುವ ಕೆಲಸ ಮಾಡುತ್ತಾರೆ ಎಂದ್ರು.