SUDDIKSHANA KANNADA NEWS/ DAVANAGERE/ DATE:06-07-2023
ಬೆಂಗಳೂರು: ವಿಧಾನಸಭೆ ಅಧಿವೇಶನ ಅಕ್ಷರಕ್ಷಃ ರಣರಂಗವಾಗಿತ್ತು. ಜೆಡಿಎಸ್ ನಾಯಕ ಹಾಗೂ ಶಾಸಕ ಹೆಚ್. ಡಿ. ಕುಮಾರಸ್ವಾಮಿ (H. D. Kumaraswamy) ಸದನದಲ್ಲಿ ವಾರ್ ಶುರು ಮಾಡಿದ್ರೆ, ಸಿದ್ದರಾಮಯ್ಯ (Siddaramaiah) ಗುರ್ ಗುರ್ ಅಂತಾನೇ ಉತ್ತರ ಕೊಟ್ಟಿದ್ದು ಸ್ವಾರಸ್ಯಕರವಾಗಿತ್ತು. ಬದ್ಧ ವೈರಿಗಳಂತೆ ವಾಗ್ಬಾಣಗಳ ಸುರಿಮಳೆಗೈದ ಕುಮಾರಸ್ವಾಮಿ ಅವರಂತೂ ಕಾಂಗ್ರೆಸ್ ವಿರುದ್ಧ ರಣಕಹಳೆ ಮೊಳಗಿಸಿದರು.
ಜೆಡಿಎಸ್ ನಲ್ಲಿದ್ದು ಅಧಿಕಾರ ಅನುಭವಿಸಿ, ಹೆಚ್. ಡಿ. ದೇವೇಗೌಡರ ಕತ್ತು ಕೊಯ್ದರು ಎಂದು ಪದೇ ಪದೇ ಪ್ರಸ್ತಾಪಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ದೇವೇಗೌಡರ ಕತ್ತು ಕೊಯ್ದು ಹೋದರು. ನಮ್ಮ ಪಕ್ಷದಲ್ಲಿ ಬೆಳೆದು ಹೊರಗಡೆ ಹೋಗಿದ್ದಾರೆ. ಅಂಥವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಗುಡುಗಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಗುರ್ ಗುರ್ ಅಂತಾನೇ ಉತ್ತರ ಕೊಟ್ಟರು.
ಇಬ್ಬರು ನಾಯಕರ ನಡುವಿನ ಜಗಳ ನೋಡುತ್ತಲೇ ಇದ್ದ ಸ್ಪೀಕರ್ ಯು. ಟಿ. ಖಾದರ್ ವಿಷಯಾಂತರವಾಗುತ್ತಿದೆ. ಚರ್ಚೆ ಮೇಲಿನ ವಿಷಯದ ಬಗ್ಗೆ ಚರ್ಚೆ ಮಾಡಿದರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಟಾಕ್ ವಾರ್ ಇಂದಿನ ವಿಧಾನಸಭೆ ಕಲಾಪದ ಹೈಲೆಟ್ಸ್. ಇಬ್ಬರು ನಾಯಕರ ವಾಗ್ಬಾಣಗಳು, ಏಟಿಗೆ ಎದುರೇಟು ಕೊಡುವುದನ್ನು ನೋಡುತ್ತಲೇ ಶಾಸಕರು ಕುಳಿತಿದ್ದರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಟ್ವೀಟ್ ವಾರ್ ಸಹ ಜೋರಾಗಿಯೇ ಇರುತ್ತದೆ. ಹೊರಗಡೆ ಮಾಧ್ಯಮದವರ ಮುಂದೆ ಮಾತನಾಡುವಾಗಲೂ ಇದು ಮುಂದುವರಿದಿರುತ್ತದೆ. ಯಾವಾಗ ಹೇಳಿಕೆ ಕೊಟ್ಟರೂ ಏಟಿಗೆ ಎದುರೇಟು ಇದ್ದೇ ಇರುತ್ತೆ.
ಈ ಸುದ್ದಿಯನ್ನೂ ಓದಿ:
Rajinikanth: ಸೂಪರ್ ಸ್ಟಾರ್ ರಜಿನಿಕಾಂತ್, ಶಿವಣ್ಣ ನಟನೆಯ ಜೈಲರ್ ಸಿನಿಮಾ ಹವಾ ಜೋರು: ಯಾವಾಗ ರಿಲೀಸ್ ಆಗ್ತದೆ, ಏನೆಲ್ಲಾ ಸ್ಪೆಷಾಲಿಟಿ ಇದೆ ಗೊತ್ತಾ…?
ಬಿಜೆಪಿ ವಿರೋಧ ಪಕ್ಷದ ಕೆಲಸ ನಿರ್ವಹಿಸಬೇಕು. ಆದ್ರೆ, ಕುಮಾರಸ್ವಾಮಿ ಅಬ್ಬರಿಸುತ್ತಿರುವುದನ್ನು ನೋಡಿದರೆ ಏನೋ ನಡೆಯುತ್ತಿದೆ ರಾಜಕಾರಣದಲ್ಲಿ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಹ ರಾಜಕಾರಣದಲ್ಲಿ ಯಾವಾಗ ಏನ್ ಆಗುತ್ತೋ ಏನೋ ಗೊತ್ತಾಗುವುದಿಲ್ಲ ಎಂಬ ಮಾತು ಹೇಳಿರುವುದು ನೋಡಿದರೆ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗುವ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನು ಟ್ವೀಟ್ ವಾರ್ ಮುಂದುವರಿಸಿರುವ ಸಿದ್ದರಾಮಯ್ಯ (Siddaramaiah) ಅವರಂತೂ ಕೆರಳಿ ಕೆಂಡವಾಗಿದ್ದಾರೆ. ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಬೆಂಕಿಯುಗುಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ H D Kumaraswamy ಅವರು ಅಧಿಕಾರವಿಲ್ಲದೆೇ ಹತಾಶರಾಗಿದ್ದಾರೆ. ಅವರ ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಈವರೆಗೆ ಮಾಡಿರುವ ಯಾವುದೇ ಒಂದು ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರ? ಕತ್ತಲಲ್ಲಿ ನಿಂತು ಕಲ್ಲೆಸೆದು ಓಡಿ ಹೋಗುತ್ತಾರೆ. ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ. ಹೊಸ ಸರ್ಕಾರ ಬಂದಾಗ ಆಡಳಿತದ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲೇಬೇಕಾಗುತ್ತದೆ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ
ಕಾರಣ ವರ್ಗಾವಣೆಯಾಗಿರಲಿಲ್ಲ. ಈಗ ಆ ಸಾಮಾನ್ಯ ವರ್ಗಾವಣೆಗಳೂ ನಡೆಯುತ್ತಿದೆ. ಇದು ನಮ್ಮಿಂದ ಶುರುವಾದುದಲ್ಲ, ಹಿಂದಿನ ಸರ್ಕಾರದಲ್ಲಿಯೂ ನಡೆದಿದೆ, ಮುಂದೆಯೂ ನಡೆಯುತ್ತದೆ. ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆ ನಡೆದಿರಲಿಲ್ಲವೇ? ಅವರೂ ಹಣ ಪಡೆದೇ ವರ್ಗಾವಣೆ ನಡೆಸಿದ್ದೇ? ಎಂದು ಪ್ರಶ್ನಿಸಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದ ಮಾತ್ರಕ್ಕೆ ನನ್ನ ಪುತ್ರ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎನ್ನುವುದು ಕುಮಾರಸ್ವಾಮಿ ಅವರ ಕಲ್ಪನಾ ವಿಲಾಸ. ಇದೇ ವಾದವನ್ನು ಅವರಿಗೆ ಮತ್ತು ಅವರ ಕುಟುಂಬಕ್ಕೆ ಅನ್ವಯಿಸಬಹುದಾ? ಕುಮಾರಸ್ವಾಮಿಯವರ ಅಣ್ಣ ಸಚಿವರಾಗಿದ್ದರು, ಈಗ ಶಾಸಕ, ಇವರ ಪತ್ನಿ ಶಾಸಕಿಯಾಗಿದ್ದರು, ತಂದೆ ಪ್ರಧಾನಿಗಳಾಗಿದ್ದರು, ಅಣ್ಣನ ಮಗ ಸಂಸದ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬದ ಸದಸ್ಯರೆಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ರಾ? ಎಂದು ಖಾರವಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ.
Siddaramaiah Angry, Siddaramaiah News, Siddaramaiah News Updates, Siddaramaiah News, Siddaramaiah And H D Kumaraswamy War, H D Kumaraswamy And Siddaramaiah Talk Fight
ಸಿದ್ದರಾಮಯ್ಯ ಸುದ್ದಿ, ಸಿದ್ದರಾಮಯ್ಯ ಟಾಕ್ ಫೈಟ್, ಸಿದ್ದರಾಮಯ್ಯ – ಕುಮಾರಸ್ವಾಮಿ ವಾಗ್ಬಾಣ, ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್
Comments 1