Home ದಾವಣಗೆರೆ ಮಾತು ಕೊಟ್ಟಂತೆ ನುಡಿದಂತೆ ನಡೆದ ಸಿದ್ದರಾಮಯ್ಯರು ನಮಗೆಲ್ಲ ಆದರ್ಶ: ಬಿ. ಎನ್. ವಿನಾಯಕ್
ದಾವಣಗೆರೆನವದೆಹಲಿಬೆಂಗಳೂರು

ಮಾತು ಕೊಟ್ಟಂತೆ ನುಡಿದಂತೆ ನಡೆದ ಸಿದ್ದರಾಮಯ್ಯರು ನಮಗೆಲ್ಲ ಆದರ್ಶ: ಬಿ. ಎನ್. ವಿನಾಯಕ್

Share
ಸಿದ್ದರಾಮಯ್ಯ
Share

ದಾವಣಗೆರೆ: ಕರ್ನಾಟಕ ರಾಜ್ಯ ಕಂಡ ಅಪ್ರತಿಮ, ನಿಷ್ಕಳಂಕ, ದಕ್ಷ ಆಡಳಿತಗಾರ ಸಿದ್ದರಾಮಯ್ಯರು ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ನುಡಿದಂತೆ ನಡೆದ ಮತ್ತು ಮಾತು ಕೊಟ್ಟಂತೆ ನಡೆಯುವ ಮೂಲಕ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ ಎಂದು ಕೆಪಿಸಿಸಿ ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರು ಹಾಗೂ ದಾವಣಗೆರೆ ಕಾಂಗ್ರೆಸ್ ಎಸ್ಸಿ ಘಟಕದ ಉಪಾಧ್ಯಕ್ಷ ಬಿ. ಎನ್. ವಿನಾಯಕ್ ಹೇಳಿದ್ದಾರೆ.

ಸಿದ್ದರಾಮಯ್ಯರು 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿ ಅತ್ಯುತ್ತಮ ಆಡಳಿತ ನೀಡಿದ್ದರು. ಹಣಕಾಸು ಸಚಿವರಾಗಿ 17 ಬಜೆಟ್ ಗಳನ್ನು ಮಂಡಿಸಿದ ಅಪರೂಪದ ದಾಖಲೆ ಜೊತೆಗೆ ಅತ್ಯುತ್ತಮ ಆರ್ಥಿಕ ತಜ್ಞ ಎಂಬುದನ್ನು ಸಾಬೀತುಪಡಿಸಿದ್ದರು. ನುಡಿದಂತೆ ನಡೆದ ಜನನಾಯಕ, ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಹೃದಯ ಭಾರವಾಗಿಸಿದೆ. ಆದರೂ ಅವರು ರಾಜ್ಯದ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ ಎಂದು ಬಣ್ಣಿಸಿದ್ದಾರೆ.

ಸಿದ್ದರಾಮಯ್ಯರಿಗೆ ಸಂವಿಧಾನದ ಮೇಲಿನ ಅಚಲ ಬದ್ಧತೆ, ಸಾಮಾಜಿಕ ನ್ಯಾಯದ ಪರವಾದ ಅವರ ಹೋರಾಟ, ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತತ್ವಗಳ ಮೇಲಿನ ನಿಷ್ಠೆ ನಮಗೆಲ್ಲರಿಗೂ ದಾರಿದೀಪವಾಗಿದೆ. ಬಡವರು, ಹಿಂದುಳಿದವರು, ರೈತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಕಣ್ಣೀರಿನ ಭಾಷೆಯನ್ನು ಅರ್ಥಮಾಡಿಕೊಂಡ ನಾಯಕ ಅವರು. ಅಧಿಕಾರವನ್ನು ವೈಭವಕ್ಕಾಗಿ ಅಲ್ಲ, ಜನಸೇವೆಯ ಸಾಧನವಾಗಿ ಬಳಸಿದ ಅಪರೂಪದ ಮುತ್ಸದ್ಧಿ ರಾಜಕಾರಣಿ. ಅಧಿಕಾರಕ್ಕಿಂತ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಅವರ ನಡೆ, ಸಾರ್ವಜನಿಕ ಜೀವನದಲ್ಲಿ ತತ್ವನಿಷ್ಠ ರಾಜಕಾರಣ ಹೇಗಿರಬೇಕು ಎಂಬುದಕ್ಕೆ ಜೀವಂತ ನಿದರ್ಶನ. ಅವರು ಯಾವುದೇ ಸ್ಥಾನದಲ್ಲಿರಲಿ, ನಾಡಿನ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈತರ ಸಾಲ ಮನ್ನಾ, ಅನ್ನ ಭಾಗ್ಯ, ಕ್ಷೀರಭಾಗ್ಯ, ಐದು ಗ್ಯಾರಂಟಿಗಳ ಅನುಷ್ಠಾನ ಸೇರಿದಂತೆ 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಲ್ಲಿಸಿರುವ ಸೇವೆ ಅನನ್ಯ. ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕ. ಇಂಥ ಅಪರೂಪದ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಹೈಕಮಾಂಡ್ ಮಾತಿಗೆ ಒಪ್ಪಿ ಅಧಿಕಾರದಿಂದ ಕೆಳಗಿಳಿದು ತ್ಯಾಗ ಮಾಡಿದ್ದಾರೆ. ಇದು ಪ್ರತಿಯೊಬ್ಬ ರಾಜಕಾರಣಿಗೂ ಮಾದರಿ ಎಂದು ಬಿ. ಎನ್. ವಿನಾಯಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *