Home ದಾವಣಗೆರೆ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಶೇ.75ರಷ್ಟು ಮೀಸಲಾತಿ ಸಿಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದನೆ
ದಾವಣಗೆರೆನವದೆಹಲಿಬೆಂಗಳೂರು

ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಶೇ.75ರಷ್ಟು ಮೀಸಲಾತಿ ಸಿಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದನೆ

Share
ಸಿದ್ದರಾಮಯ್ಯ
Share

ಬೆಂಗಳೂರು: ನಾನು 1996ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಅಸಮಾನತೆಯಿತ್ತು. ಆದರೆ ಆಗಲೇ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು ಎಂಬ ಕನಸುಗಳನ್ನು ಕಂಡಿದ್ದೆ. ರಾಜ್ಯದ ಜನರ ಜಾತಿವಾರು ಸಮೀಕ್ಷೆಯಾಗಿಲ್ಲ. ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ನಿಖರವಾದ ಅಂಕಿ ಅಂಶಗಳಿಲ್ಲ ಎನ್ನುವ ಕಾರಣಕ್ಕಾಗಿ ಅನೇಕ ಮೊಕದ್ದಮೆಗಳಲ್ಲಿ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿರಲಿಲ್ಲ. ಅದಕ್ಕಾಗಿ ನಾನು 2013 ಮುಖ್ಯಮಂತ್ರಿಯಾದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಮೀಕ್ಷೆಯನ್ನು ನಡೆಸುವಂತೆ ಹೇಳಿದ್ದೆ. ಆದರೆ ನಂತರದ ನಾವು ಚುನಾವಣೆಯನ್ನು ಸೋತೆವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಆಯೋಗದವರು ವರದಿಯನ್ನು ಕೊಟ್ಟಿದ್ದರು. ಆದರೆ ಅವರು ವರದಿಯನ್ನು ಒಪ್ಪಿರಲಿಲ್ಲ. ಆ ಬಳಿಕ ಕಾಂತರಾಜುರವರ ವರದಿ ತಿರಸ್ಕಾರವಾಯಿತು. 2023ರಲ್ಲಿ ಮುಖ್ಯಮಂತ್ರಿಯಾದಾಗ ಹೊಸದಾಗಿ ಮಧುಸೂದನ್‌ ನಾಯಕ್‌ ಅವರು ಹಿಂದುಳಿದ ಶಾಸಕರ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ಅವರು ವರದಿಯನ್ನು ನೀಡುವುದಾಗಿ ತಿಳಿಸಿದರು. ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಸಂದರ್ಭದಲ್ಲಿ ಅದನ್ನು ಸ್ವೀಕಾರ ಮಾಡಿದ್ದೇನೆ. ಆದರೆ ನ್ಯಾಯಾಲಯದ ಆದೇಶದಲ್ಲಿ ಅದನ್ನು ಬಹಿರಂಗಪಡಿಸಬಾರದು ಎಂದು ಇದೆ. ಈ ತಡೆಯನ್ನು ತೆರವು ಮಾಡಲು ಮನವಿ ಮಾಡುವಂತೆ ನಾನು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರಿಗೆ ಹೇಳಿದ್ದೇನೆ ಎಂದರು.

ನ್ಯಾಯಾಲಯದ ತಡೆಯಾಜ್ಞೆಯನ್ನು ಏನಾದರೂ ಮಾಡಿ ನೀವೆಲ್ಲ ಸೇರಿ ತೆರವು ಮಾಡಿಸಿ. ಮುಖ್ಯಮಂತ್ರಿಗಳು ಸೇರಿದಂತೆ ಇಲ್ಲಿರುವವರೆಲ್ಲರೂ ನನ್ನ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿದೆ. ಅದು ಜಾರಿಯಾಗಲೇಬೇಕು. ನಿಮಗೆಲ್ಲ ಸಾಮಾಜಿಕ ನ್ಯಾಯ ಸಿಗಬೇಕು. ಮೀಸಲಾತಿಯಲ್ಲಿ ಕನಿಷ್ಠ 75% ಸಿಗಲೇಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅವರೆಲ್ಲರಿಗೂ ಕೂಡ 75% ಮೀಸಲಾತಿ ಸಿಗಬೇಕು. ಎಲ್ಲರಿಗೂ ಅವರ ಜಾತಿಗೆ ಅನುಗುಣವಾಗಿ, ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು. ಈ ರೀತಿ ಮೀಸಲಾತಿ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಅಷ್ಟೇ ಅಲ್ಲದೇ ಲೋಕಸಭೆಯಲ್ಲಿ, ವಿಧಾನ ಸಭೆಯಲ್ಲಿ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿದಾಗ ಮಾತ್ರ ನಾವು ರಾಜಕೀಯ ಸಮಾನತೆ ಪಡೆದುಕೊಳ್ಳಲು ಸಾಧ್ಯ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಸಿಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣ ಆಗಲೇಬೇಕು. ಬರೀ ಹಿಂದುಳಿದ ಜಾತಿಗಳಷ್ಟೆ ಅಲ್ಲದೆ ದಲಿತರು, ಅಲ್ಪಸಂಖ್ಯಾತರು ಅವರೆಲ್ಲರೂ ಹೋರಾಟ ಮಾಡಬೇಕು. ಹಿಂದುಳಿದ ಜಾತಿಗಳಲ್ಲಿ ಕೆಟಗರಿ 1, ಕೆಟಗರಿ 2 ಎ ಇವೆರಡರಲ್ಲಿ ಸುಮಾರು 752 ಜಾತಿಗಳಿದ್ದಾವೆ. ಒಟ್ಟು 806 ಹಿಂದುಳಿದ ಜಾತಿಗಳಿವೆ. ಕೆಟಗರಿ 1 ಮತ್ತು ಕೆಟಗರಿ 2ಎ ಅಷ್ಟು ಜನಸಂಖ್ಯೆಯವರು ಮಾತ್ರ ಈ ಒಕ್ಕೂಟದಲ್ಲಿ ಇರುವಂತವರು. ಮುಂದೆ ಕೆಟಗರಿ 3ಎ, 3ಬಿ ಕೂಡ ಸೇರಬೇಕು ಎಂದರು.

2013ರಲ್ಲಿ ನಾನು ಮುಖ್ಯಮಂತ್ರಿಯಾದ ತಕ್ಷಣ ದೇವರಾಜ ಅರಸು ನಿಗಮದಲ್ಲಿ ಸಾಲ ತೆಗೆದುಕೊಂಡಿದ್ದ ಹಿಂದುಳಿದ ಜಾತಿಗಳ ಜನರ ಸಾಲವನ್ನು ಮನ್ನಾ ಮಾಡಿದ್ದೆ. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಈ ಮೂಲಕ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿದೆ, ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ಮಾಡಿದ್ದೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles