SUDDIKSHANA KANNADA NEWS/ DAVANAGERE/ DATE:08-02-2025
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಜೈಲಿನಲ್ಲಿದ್ದು ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮಾತನಾಡಿದ್ದಾರೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ದಾಸ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ತೂಗುದೀಪ ಅವರು ವಿಡಿಯೋ ಬಿಡುಡೆ ಮಾಡಿದ್ದು, ಅಭಿಮಾನಿಗಳಿಗೆ ದೊಡ್ಡ ಅಪ್ ಡೇಟ್ ನೀಡಿದ್ದಾರೆ. ಬಾಕಿ ಉಳಿದಿದ್ದ ಸಿನಿಮಾಗಳನ್ನು ಪೂರ್ಣಗೊಳಿಸುವತ್ತ ಚಿಂತಿಸುತ್ತಿದ್ದಾರೆ. ಈ ನಡುವೆ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ತೂಗುದೀಪ ಅವರು, ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ.
ಜೈಲಿನಿಂದ ಹೊರಗಡೆ ಬಂದಿರುವ ದರ್ಶನ್ ಬರ್ತ್ ಡೇ ಅನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಹಾಗೂ ಆರೋಗ್ಯ ಸರಿ ಇಲ್ಲದ ಕಾರಣ ಸಿಂಪಲ್ ಆಗಿ
ಜನುಮದಿನ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ. ಧನ್ಯವಾದ ಹೇಳಿದ್ರೂ , ಏನೇ ಪದ ಬಳಕೆ ಮಾಡಿದ್ರೂ ತುಂಬಾ ಕಡಿಮೆ. ನೀವು ತೋರಿಸಿದಷ್ಟು ಪ್ರೀತಿ ಅಭಿಮಾನ, ಅದು ಯಾವ ತರ ಅದನ್ನು ರಿಟರ್ನ್ ಮಾಡಲಿ ಗೊತ್ತಾಗ್ತಿಲ್ಲ. ಈಗ ಏನಕ್ಕೆ ನಾನು ಕ್ಯಾಮೆರ ಮುಂದೆ ಬಂದೆ ಅಂದರೆ ನನ್ನ ಬರ್ತ್‌ಡೇ ವಿಚಾರವಾಗಿ ಎಂದು ದರ್ಶನ್ ಹೇಳಿದ್ದಾರೆ.
ನನಗೂ ಆಸೆ ಇತ್ತು. ನೀವು ಆಸೆ ಪಟ್ಟಿದ್ರಿ. ನಿಮ್ಮನ್ನ ನಾನು ಮೀಟ್ ಮಾಡಬೇಕು ಅಂತ ನನಗೂ ಆಸೆ ಇತ್ತು. ಈ ಸಲ ಒಂದು ಸಮಸ್ಯೆ ಏನು ಅಂದರೆ, ದೊಡ್ಡ ಸಮಸ್ಯೆ ಅಂತ ಹೇಳ್ತಿಲ್ಲ. ಒಂದೇ ಒಂದು ಸಮಸ್ಯೆ ಅಂದರೆ ಅದು ಆರೋಗ್ಯ ವಿಚಾರ. ಹಾಗಾಗಿ, ಜನುಮದಿನವನ್ನು ಸಿಂಪಲ್ ಆಗಿ ಆಚರಿಸುತ್ತೇನೆ. ನಿಮ್ಮನ್ನು ಭೇಟಿಯಾಗಬೇಕೆಂಬ ತುಡಿತ ಇದೆ. ಆದ್ರೆ, ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.