Home ದಾವಣಗೆರೆ ಇನ್ನು ನಡೆಯಲ್ಲ ಆಸ್ಪತ್ರೆಗಳ ಮಾರ್ಕೆಟಿಂಗ್ ಆಟ; ಕಿಡ್ನಿ ಕಸಿ ಯಶಸ್ಸಿನ ನೈಜ ವರದಿ ಬಿಡುಗಡೆಗೆ ಕೇಂದ್ರ ಸರ್ಕಾರದ ಆದೇಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಇನ್ನು ನಡೆಯಲ್ಲ ಆಸ್ಪತ್ರೆಗಳ ಮಾರ್ಕೆಟಿಂಗ್ ಆಟ; ಕಿಡ್ನಿ ಕಸಿ ಯಶಸ್ಸಿನ ನೈಜ ವರದಿ ಬಿಡುಗಡೆಗೆ ಕೇಂದ್ರ ಸರ್ಕಾರದ ಆದೇಶ!

Share
ಆಸ್ಪತ್ರೆ
Share

ವದೆಹಲಿ: ಭಾರತದಲ್ಲಿ ಕಿಡ್ನಿ ಕಸಿ (Kidney Transplant) ಮಾಡಿಸಿಕೊಳ್ಳುವ ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ಮಹತ್ವದ ಮತ್ತು ಐತಿಹಾಸಿಕ ಕೊಡುಗೆಯೊಂದನ್ನು ನೀಡಿದೆ.

ಇನ್ಮುಂದೆ ದೇಶದ ಯಾವುದೇ ಕಿಡ್ನಿ ಕಸಿ ಆಸ್ಪತ್ರೆಯು ಕೇವಲ ತನ್ನ ಯಶಸ್ಸಿನ ಸಂಖ್ಯೆಯನ್ನು ಮಾತ್ರ ಹೇಳಿಕೊಂಡು ಪ್ರಚಾರ ಮಾಡುವಂತಿಲ್ಲ!

ಬದಲಿಗೆ, ಚಿಕಿತ್ಸೆಯ ನಂತರ ರೋಗಿಗಳು ಎಷ್ಟು ವರ್ಷ ಬದುಕಿದ್ದಾರೆ, ಎಷ್ಟು ಫೇಲ್ಯೂರ್‌ಗಳಾಗಿವೆ ಎಂಬ ಸಂಪೂರ್ಣ ಪಾರದರ್ಶಕ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಷ್ಟ್ರೀಯ ಅಂಗಾಂಗ ಮತ್ತು ಕರಡು ಕಸಿ ಸಂಸ್ಥೆ (NOTTO) ನಿರ್ದೇಶಕರಾದ ಡಾ. ಅನಿಲ್ ಕುಮಾರ್ ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದಾರೆ.

ಆಸ್ಪತ್ರೆಗಳು ವೆಬ್‌ಸೈಟ್‌ನಲ್ಲಿ ಏನನ್ನು ಪ್ರಕಟಿಸಬೇಕು?

ಹೊಸ ನಿಯಮಾವಳಿ ಪ್ರಕಾರ ಪ್ರತಿಯೊಂದು ಟ್ರಾನ್ಸ್‌ಪ್ಲಾಂಟ್ ಸೆಂಟರ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೆಳಗಿನ ಪ್ರಮುಖ ಅಂಕಿ-ಅಂಶಗಳನ್ನು ಪ್ರದರ್ಶಿಸಬೇಕು:

  1. ರೋಗಿಗಳ ಬದುಕುಳಿಯುವಿಕೆಯ ಪ್ರಮಾಣ (Survival Rates)

  2. ಚಿಕಿತ್ಸೆಯ ನಂತರ ಸಂಭವಿಸಿದ ಸಾವುಗಳ ಸಂಖ್ಯೆ ಮತ್ತು ಶೇಕಡಾವಾರು ಮಾಹಿತಿ

  3. ಗ್ರಾಫ್ಟ್ ವೈಫಲ್ಯ (ಅಳವಡಿಸಿದ ಕಿಡ್ನಿ ಕೆಲಸ ಮಾಡದೆ ನಿಲ್ಲುವುದು)

  4. ಡಿಸ್ಚಾರ್ಜ್ ಆದಾಗಿನ ಫಲಿತಾಂಶ, 6 ತಿಂಗಳು, 1 ವರ್ಷ, 3 ವರ್ಷ ಹಾಗೂ 5 ವರ್ಷಗಳ ನಂತರದ ದೀರ್ಘಾವಧಿಯ ಹೆಲ್ತ್ ರಿಪೋರ್ಟ್.

ರೋಗಿಗಳಿಗೆ ಏನು ಲಾಭ?

ಇಲ್ಲಿಯವರೆಗೆ ಆಸ್ಪತ್ರೆಗಳು ಕೇವಲ ಸರ್ಜರಿ ಸಕ್ಸಸ್ ರೇಟ್ ಅಷ್ಟೇ ತೋರಿಸುತ್ತಿದ್ದವು. ಆದರೆ ವರ್ಷಗಳ ನಂತರ ಏನಾಯಿತು ಎಂಬ ಮಾಹಿತಿ ಯಾರಿಗೂ ಸಿಗುತ್ತಿರಲಿಲ್ಲ. ಈಗ ಈ ಹೊಸ ನಿಯಮದಿಂದಾಗಿ, ರೋಗಿಗಳು ಕೇವಲ ಜಾಹೀರಾತುಗಳನ್ನು ನಂಬಿ ಹೋಗದೆ, ಆಸ್ಪತ್ರೆಯ ನಿಜವಾದ ಕ್ಲಿನಿಕಲ್ ರೆಕಾರ್ಡ್ ನೋಡಿ ತಮಗೆ ಬೇಕಾದ ಅತ್ಯುತ್ತಮ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಭಾರತದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪಾರದರ್ಶಕತೆಗೆ ಕಾರಣವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *