SUDDIKSHANA KANNADA NEWS/ DAVANAGERE/ DATE:23-11-2024
ದಾವಣಗೆರೆ: ಎಸ್. ಎಸ್. ಬಡಾವಣೆಯ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾಪರ್ ಏಜ್ ಗ್ರೂಪ್ ಆಫ್ ಇನ್ಸಿಸ್ಟಿಟ್ಯೂಟ್ ಮಾಲೀಕ ಜಿ. ಎನ್. ಶರತ್ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ನೆರವೇರಲಿದೆ.
ನಗರದ ಶಾಮನೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ.
ಪುತ್ರನ ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾರ್ಥಿಗಳು, ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು, ಅಕ್ಕಪಕ್ಕದ ನಿವಾಸಿಗಳು ಆಗಮಿಸಿ ಶರತ್ ನಿಧನಕ್ಕೆ ಕಂಬಿನಿ ಮಿಡಿದಿದ್ದಾರೆ. ಅದರಲ್ಲಿಯೂ ಇವರ ಇನ್ಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೂ ಸಹ ಕಣ್ಣೀರಾಕಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವ ಮೂಲಕ ಮನೆ ಮಾತಾಗಿದ್ದರು. ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಜಿ. ಎನ್. ಶರತ್ ಉದ್ಯೋಗ ಸೇರಲು ಆಗಿರಲಿಲ್ಲ. ಇದೊಂದು ನೋವು ಅವರಿಗೆ ಕಾಡುತಿತ್ತು ಎನ್ನಲಾಗಿದೆ.
ದಾವಣಗೆರೆಯ ಪ್ರತಿಷ್ಠಿತ ಬಡಾವಣೆಯಾದ ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಸಮೀಪ ಕಾಪರ್ ಏಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥೆ ಕಟ್ಟಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜನಪ್ರಿಯತೆ ಗಳಿಸಿದ್ದರು.
ತಂದೆ ಬಿಎಸ್ ಎನ್ ಎಲ್ ನಿವೃತ್ತ ಎಜಿಎಂ ಆಗಿದ್ದ ನಾಗರಾಜ್ ಹಾಗೂ ತಾಯಿ ಜಾನಕಿ ಅವರನ್ನು ಸಂತೈಸುವುದು ತುಂಬಾನೇ ಕಷ್ಟವಾಗಿದೆ. ಮಗನನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಮದುವೆ ಮಾಡಲು ಹುಡುಗಿ ಹುಡುಕುತ್ತಿದ್ದ ದಂಪತಿಗೆ ಪುತ್ರ ಶೋಕ ನಿರಂತರಂ ಎಂಬಂತೆ ಶರತ್ ನಿರ್ಧಾರ ಮಾಡಿಬಿಟ್ಟಿದೆ.