Home ಕ್ರೈಂ ನ್ಯೂಸ್ ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ವೃದ್ಧ ಸಾಧುಗಳನ್ನು ಕೊಂದು ದೇಹಕ್ಕೆ ಬೆಂಕಿ ಹಚ್ಚಿದ ಹಂತಕ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ವೃದ್ಧ ಸಾಧುಗಳನ್ನು ಕೊಂದು ದೇಹಕ್ಕೆ ಬೆಂಕಿ ಹಚ್ಚಿದ ಹಂತಕ ಬಂಧನ!

Share
ದೇವಸ್ಥಾನ
Share

ಶಾಹಜಹಾನ್‌ಪುರ (ಉತ್ತರ ಪ್ರದೇಶ): ದೇವಸ್ಥಾನವನ್ನು ತಮ್ಮ ವಶಕ್ಕೆ ಪಡೆಯುವ ದುರುದ್ದೇಶದಿಂದ ಇಬ್ಬರು ವೃದ್ಧ ಸಾಧುಗಳನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿ, ಆನಂತರ ಅವರ ಮೃತದೇಹಗಳಿಗೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಶಾಹಜಹಾನ್‌ಪುರ ಜಿಲ್ಲೆಯ ಸುಥಾ ಗ್ರಾಮದಲ್ಲಿ ನಡೆದಿದೆ.

ಈ ಭೀಕರ ಕೃತ್ಯವೆಸಗಿದ 35 ವರ್ಷದ ಆರೋಪಿ ಸುಮಿತ್ ಸಿಂಗ್ ಎಂಬಾತನನ್ನು ಖುದಾಗಂಜ್ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಶಾಹಜಹಾನ್‌ಪುರ ಜಿಲ್ಲೆಯ ಖುದಾಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಥಾ ಗ್ರಾಮದ ದೇವಸ್ಥಾನವೊಂದರಲ್ಲಿ ಬಾಬಾ ಗೋಪಾಲ್ ದಾಸ್ (70) ಮತ್ತು ಬಾಬಾ ಬಿಹಾರಿ ದಾಸ್ (60) ಎಂಬ ಇಬ್ಬರು ವೃದ್ಧ ಸಾಧುಗಳು ವಾಸಿಸುತ್ತಿದ್ದು, ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಗ್ರಾಮಸ್ಥರು ಗುರುವಾರ ಬೆಳಿಗ್ಗೆ ದೇವಸ್ಥಾನದ ಆವರಣಕ್ಕೆ ಹೋದಾಗ ಸಾಧುಗಳ ದೇಹಗಳು ಭಾಗಶಃ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಕೊಲೆಗೆ ಕಾರಣ ಮತ್ತು ಸಾಕ್ಷ್ಯ ನಾಶ:

ಪೊಲೀಸರ ತನಿಖೆಯ ವೇಳೆ ಆರೋಪಿ ಸುಮಿತ್ ಸಿಂಗ್ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಸಾಧುಗಳು ನಿದ್ರಿಸುತ್ತಿದ್ದಾಗ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾಗಿ ಆತ ತಿಳಿಸಿದ್ದಾನೆ. ಬಳಿಕ, ಕೊಲೆಯನ್ನು ಮುಚ್ಚಿಹಾಕಲು ದೇವಸ್ಥಾನದಲ್ಲಿದ್ದ ಸೌದೆ ಮತ್ತು ತುಪ್ಪವನ್ನು ಬಳಸಿ ಮೃತದೇಹಗಳಿಗೆ ಬೆಂಕಿ ಹಚ್ಚಿದ್ದಾಗಿ ಹೇಳಿದ್ದಾನೆ.

ಆರೋಪಿ ಸುಮಿತ್ ಸಿಂಗ್ ತನಗೆ ಆ ದೇವಸ್ಥಾನದಲ್ಲಿ ಇರಲು ಮತ್ತು ದೇವಸ್ಥಾನದ ಸ್ವತ್ತಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಆಸೆ ಇತ್ತು. ಹೀಗಾಗಿ ಈ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.

ಪೊಲೀಸ್ ಕ್ರಮ:

ಆರೋಪಿ ನೀಡಿದ ಮಾಹಿತಿಯ ಮೇರೆಗೆ ದೇವಸ್ಥಾನದ ಹತ್ತಿರದ ಪೊದೆಯಲ್ಲಿ ಬಾಂಚಿದ್ದ ಹತ್ಯೆಗೆ ಬಳಸಿದ ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಎಸ್‌ಪಿ ದೀಕ್ಷಾ ಭಾವ್ರೆ ಪ್ರಕಾರ, ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles