
ಮುಂಬೈ: ಮಕ್ಕಳ ಆರೈಕೆಗಾಗಿ ಸಿನಿಮಾದಿಂದ ದೀರ್ಘ ವಿರಾಮ ಪಡೆದು, ಈ ವರ್ಷ ಬಿಡುಗಡೆಯಾದ ‘ಆಖ್ರಿ ಸವಾಲ್’ ಚಿತ್ರದ ಮೂಲಕ ಕಂಬ್ಯಾಕ್ ಮಾಡಿರುವ ನಟಿ ಸಮೀರಾ ರೆಡ್ಡಿ, ಬಾಲಿವುಡ್‌ಗಿಂತ ಸೌತ್ ಸಿನಿಮಾರಂಗವೇ ತನಗೆ ಹೆಚ್ಚಿನ ಗೌರವ ಮತ್ತು ಸ್ಟಾರ್‌ಡಮ್ ನೀಡಿದೆ ಎಂದು ಮುಕ್ತವಾಗಿ ಮಾತನಾಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಜತೆಗೆ ಮಾತನಾಡಿದ ಅವರು, ಚಿರಂಜೀವಿ, ಜೂ ಎನ್‌ಟಿಆರ್, ಸೂರ್ಯ, ಅಜಿತ್ ಮತ್ತು ಮೋಹನ್‌ಲಾಲ್ ಅವರಂತಹ ದಿಗ್ಗಟರೊಂದಿಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು ಎಂದಿದ್ದಾರೆ.
ಬಾಲಿವುಡ್‌ಗಿಂತ ದಕ್ಷಿಣದ ಚಿತ್ರರಂಗದಲ್ಲಿ ಕಲಾತ್ಮಕ ಮೌಲ್ಯ, ಆರ್ಥಿಕ ಸಂಭಾವನೆ ಹಾಗೂ ಸಿಕ್ಕಿದ ಗೌರವ ಬಹಳ ಹೆಚ್ಚಿದೆ ಎಂದು ತಿಳಿಸಿದ್ದಾರೆ. 18 ವರ್ಷಗಳ ಬಳಕೆಯೂ ‘ವಾರಣಮಾಯಿರಮ್’ ಚಿತ್ರದ ಮೇಘನಾ ಪಾತ್ರಕ್ಕಾಗಿ ದಕ್ಷಿಣದ ಅಭಿಮಾನಿಗಳು ತೋರಿಸುವ ಪ್ರೀತಿ ಅಪ್ರತಿಮ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣದ ಸಿನಿಮಾಗಳಿಗೆ ಮೆಚ್ಚುಗೆ: ಬಾಲಿವುಡ್‌ಗಿಂತ ಸೌತ್ ಸಿನಿಮಾರಂಗದಲ್ಲಿ ತನಗೆ ಹೆಚ್ಚಿನ ಗೌರವ, ಮೌಲ್ಯ ಮತ್ತು ಸ್ಟಾರ್‌ಡಮ್ ಸಿಕ್ಕಿದೆ ಎಂದು ಸಮೀರಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡ ನಟರ ಜತೆ ನಟನೆ: ಚಿರಂಜೀವಿ, ಜೂ ಎನ್‌ಟಿಆರ್, ಸೂರ್ಯ, ಅಜಿತ್ ಹಾಗೂ ಮೋಹನ್‌ಲಾಲ್ ಅವರಂತಹ ದಿಗ್ಗಟರ ಜತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಿನಿಮಾಗೆ ಕಂಬ್ಯಾಕ್: ಸಂಜಯ್ ದತ್ ಜೊತೆ ‘ಆಖ್ರಿ ಸವಾಲ್’ ಚಿತ್ರದ ಮೂಲಕ ಈ ವರ್ಷ ನಟಿ ಸಮೀರಾ ದೊಡ್ಡ ಪರದೆಗೆ ಮರಳಿದ್ದಾರೆ.
ಮಕ್ಕಳಿಗಾಗಿ ವಿಶೇಷ ವ್ಯವಸ್ಥೆ: ತಾಯಿಯ ಜವಾಬ್ದಾರಿಯನ್ನು ನಿಭಾಯಿಸಲು ವಾರಾಂತ್ಯದಲ್ಲಷ್ಟೇ ಶೂಟಿಂಗ್ ಮಾಡುವಂತೆ ಸಂಜಯ್ ದತ್ ಅನುವು ಮಾಡಿಕೊಟ್ಟಿದ್ದನ್ನು ಸಮೀರಾ ಸ್ಮರಿಸಿದ್ದಾರೆ.
ಅಭಿಜಿತ್ ಮೋಹನ್ ವಾರಂಗ್ ನಿರ್ದೇಶನದ ‘ಆಖ್ರಿ ಸವಾಲ್’ ಚಿತ್ರದಲ್ಲಿ ಸಂಜಯ್ ದತ್, ನಮಾಶಿ ಚಕ್ರವರ್ತಿ, ಅಮಿತ್ ಸಾಧ್ ಹಾಗೂ ಸಮೀರಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳೊಂದಿಗೆ ಸಮಯ ಕಳೆಯಲು ಅನುಕೂಲವಾಗುವಂತೆ ವಾರಾಂತ್ಯದಲ್ಲಿ ಮಾತ್ರ ಶೂಟಿಂಗ್ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ನಟಿ ಸಂಜಯ್ ದತ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.




