Home ಕ್ರೀಡೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಿರಾಜ್ ಅಹ್ಮದ್ ಕೈಬಿಡಲು ಧರ್ಮವೇ ಕಾರಣ: ಕಾಂಗ್ರೆಸ್ ಆರೋಪ, ಬಿಜೆಪಿ ತಿರುಗೇಟು!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಿರಾಜ್ ಅಹ್ಮದ್ ಕೈಬಿಡಲು ಧರ್ಮವೇ ಕಾರಣ: ಕಾಂಗ್ರೆಸ್ ಆರೋಪ, ಬಿಜೆಪಿ ತಿರುಗೇಟು!

Share
ಸಿರಾಜ್ ಅಹ್ಮದ್
Share

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅಹ್ಮದ್  ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಸಿರಾಜ್ ಅವರ ಆಯ್ಕೆ ಮಾಡದಿರುವುದರ ಹಿಂದೆ ಧರ್ಮದ ತಾರತಮ್ಯವಿದೆ ಎಂದು ಕಾಂಗ್ರೆಸ್ ಸಂಸದ್ ಇಮ್ರಾನ್ ಮಸೂದ್ ಆರೋಪಿಸಿದ್ದರೆ, ಇದಕ್ಕೆ ಬಿಜೆಪಿ ತೀವ್ರವಾಗಿ ತಿರುಗೇಟು ನೀಡಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ವಿಭಜಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಕಟುವಾಗಿ ಟೀಕಿಸಿದೆ.

ಮಾಜಿ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್ ಮತ್ತು ರವಿಶಾಸ್ತ್ರಿ ಕೂಡ ಸಿರಾಜ್ ಅವರ ಅನುಭವವನ್ನು ಪರಿಗಣಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ನಾಯಕ ಶುಭಮನ್ ಗಿಲ್ ಮತ್ತು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರು ಪರಿಸ್ಥಿತಿಗೆ ತಕ್ಕಂತೆ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿವಾದದ ಹಿನ್ನೆಲೆ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ 11 ನಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್ ಆರೋಪ: ಸಿರಾಜ್ ಅವರ ಹೆಸರಿನ ಕಾರಣದಿಂದಲೇ (ಧರ್ಮದ ಆಧಾರದ ಮೇಲೆ) ಉತ್ತಮ ಪ್ರದರ್ಶನ ನೀಡಿದರೂ ತಂಡದಲ್ಲಿ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಸಂಸದ್ ಇಮ್ರಾನ್ ಮಸೂದ್ ದೂರಿದ್ದಾರೆ.

ಬಿಜೆಪಿ ಆಕ್ರೋಶ: ಕ್ರಿಕೆಟ್ ಆಯ್ಕೆಯಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಧೋರಣೆ ನಾಚಿಕೆಗೇಡಿನದ್ದು ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕಿಡಿಕಾರಿದ್ದಾರೆ. ರವೀಂದ್ರ ಜೇಡೇಜಾ ಕೂಡ ಹೊರಗುಳಿದಿರುವುದನ್ನು ಉಲ್ಲೇಖಿಸಿದ್ದಾರೆ.

ತಂಡದ ಸಮರ್ಥನೆ: ಎಲ್ಲಾ ವೇಗಿಗಳು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಸೀತಾಂಶು ಕೊಟಕ್ ಸಮರ್ಥಿಸಿಕೊಂಡಿದ್ದಾರೆ.

Share