SUDDIKSHANA KANNADA NEWS/ DAVANAGERE/ DATE:28-03-2025
ದಾವಣಗೆರೆ: ಭಾವೈಕ್ಯತೆ ಮತ್ತು ಸಾಮರಸ್ಯದ ಸಂದೇಶ ಸಾರುವ ರಂಜಾನ್ ಪವಿತ್ರ ತಿಂಗಳ ಅಂಗವಾಗಿ, ಭಾಷಾ ನಗರದಲ್ಲಿನ ಮುಸ್ಲಿಂ ಸಮಾಜದ ಮುಖಂಡರಾದ ಜನಾಬ್ ಸೈಯದ್ ಸೈಪುಲ್ಲಾ ಸಾಬ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ಭಾಗವಹಿಸಿದರು.
ರಂಜಾನ್ ಹಾಗೂ ಯುಗಾದಿ ಹಬ್ಬವು ಬರುತ್ತಿದೆ. ಎಲ್ಲರೂ ಸಾಮರಸ್ಯದ ಹಬ್ಬ ಆಚರಿಸಿ. ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳೋಣ. ಇಫ್ತಿಯಾರ್ ಕೂಟದಲ್ಲಿ ಎಲ್ಲರೂ ಖುಷಿಖುಷಿಯಾಗಿ ಪಾಲ್ಗೊಂಡಿದ್ದು, ನನಗೂ ಸಂತಸ ತಂದಿದೆ ಎಂದು ತಿಳಿಸಿದರು.
ಸಮಸ್ತ ಮುಸ್ಲಿಂ ಸಮಾಜ ಬಾಂಧವರಿಗೆ ರಂಜಾನ್ ಉಪವಾಸ ಹಾಗೂ ಹಬ್ಬದ ಮಹತ್ವ ತಿಳಿಸುವುದರೊಂದಿಗೆ ಹಬ್ಬದ ಶುಭಾಶಯಗಳನ್ನು ಸಚಿವರು ಹೇಳಿದರು.
ಪ್ರತಿವರ್ಷವೂ ಸೈಯದ್ ಸೈಫುಲ್ಲಾ ಅವರು ಸಾಮರಸ್ಯದ ರಂಜಾನ್ ಹಬ್ಬದ ಅಂಗವಾಗಿ ಇಫ್ತಿಯಾರ್ ಕೂಟ ಆಯೋಜಿಸುತ್ತಾರೆ. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಸೈಯದ್ ಸೈಫುಲ್ಲಾ ಅವರ ಕಾರ್ಯ ಶ್ಲಾಘನೀಯ. ಜನಸೇವೆ ಜೊತೆಗೆ ಇಂಥ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ದಾವಣಗೆರೆಯಲ್ಲಿ ಇದ್ದರೆ ಸೈಯದ್ ಸೈಫುಲ್ಲಾ ಅವರು ಆಯೋಜನೆ ಮಾಡುವ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಳ್ಳುತ್ತೇನೆ. ಪ್ರೀತಿಯಿಂದ ಆಹ್ವಾನ ನೀಡುತ್ತಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಧರ್ಮದವರು
ಅಣ್ಣ ತಮ್ಮೆಂದಿರಂತೆ ಇರಬೇಕು. ಸೌಹಾರ್ದತೆಯಿಂದ ಜೀವನ ಸಾಗಿಸೋಣ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಕರೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಜನಾಬ್ ಸೈಯದ್ ಸೈಫುಲ್ಲಾ ಅವರು ಮಾತನಾಡಿ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಹರಿಕಾರ, ಎಲ್ಲರೂ ಪ್ರೀತಿಯಿಂದ ಕರೆಯುವ ಮಲ್ಲಣ್ಣ ಅವರು ಇಫ್ತಿಯಾರ್ ಕೂಟಕ್ಕೆ ಬಂದಿದ್ದು ಸಂತಸ ತಂದಿದೆ. ಜಿಲ್ಲೆಗೆ ಮತ್ತಷ್ಟು ಅವರಿಂದ ಅಭಿವೃದ್ಧಿ ಮಹಾಪೂರವೇ ಹರಿದು ಬರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜನಾಬ್ ಸೈಯದ್ ಸೈಫುಲ್ಲಾ ಸಾಬ್, ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೆ. ಚಮನ್ ಸಾಬ್, ಪಾಲಿಕೆ ಮಾಜಿ ಸದಸ್ಯರಾದ ಜಿ. ಎಸ್. ಮಂಜುನಾಥ್ ಗಡಿಗುಡಾಳ್, ರಹೀಂ ಸಾಬ್, ಅಖಿಲ ಭಾರತ ರಾಷ್ಟ್ರೀಯ ಯುವ
ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು, ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.