ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಲಿಂಗಾಯತ ಸಮುದಾಯ ತುಳಿಯುವ ಕೆಲಸ ಬಿಜೆಪಿಯಲ್ಲಿ ಆಗಿದೆ: ಎಸ್. ಎಸ್. ಮಲ್ಲಿಕಾರ್ಜುನ್

On: April 17, 2023 10:55 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:17-04-2023

 

ದಾವಣಗೆರೆ (DAVANAGERE): ಲಿಂಗಾಯತ ಸಮುದಾಯದ ನಾಯಕರನ್ನು ತುಳಿಯುವ ಕೆಲಸ ಬಿಜೆಪಿ(BJP)ಯಲ್ಲಿ ಆಗಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರೇ ಪ್ರಮುಖರಾಗಿದ್ದು, ಅವರನ್ನೇ ಮೂಲೆಗುಂಪು ಮಾಡಲಾಗಿದೆ.  ಯಡಿಯೂರಪ್ಪರ ಬೆಂಬಲಿಗರಿಗೂ ಟಿಕೆಟ್ (TICKET)ಸಿಕ್ಕಿಲ್ಲ. ಇನ್ನು ಮೂರು ದಿನಗಳ ಕಾಲ ಸಮಯ ಇದೆ. ಯಾರ್ಯಾರು ಬರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಮಾಜಿ ಸಚಿವ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN)ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ (JAGADISH SHETTER), ಲಕ್ಷ್ಮಣ ಸವದಿ (LAKSHMAN SAVADI(ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ (CONGRESS) ಸೇರ್ಪಡೆಯಾಗಿರುವುದರಿಂದ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಇನ್ನು ಹಲವು ನಾಯಕರು ಕಾಂಗ್ರೆಸ್ ಬರುತ್ತಾರೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ (BJP)ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮೂಲಭೂತ ಸೌಲಭ್ಯ ಕಲ್ಪಿಸಲು ಕಾಂಗ್ರೆಸ್ ಸದಾ ಸಿದ್ಧ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಜನರ ಆಶೀರ್ವಾದ ಬೇಕಿದೆ. ಈ ಬಾರಿ ಅದು ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 13ರಂದು ನಾಮಪತ್ರ ಸಲ್ಲಿಸುವಾಗ ಬಿ ಫಾರಂ ಬಂದಿರಲಿಲ್ಲ. ಈಗ ಬಿ ಫಾರಂ (B FORM) ಸಿಕ್ಕಿದ್ದು, ಅರ್ಜಿ ಸಲ್ಲಿಸಿದ್ದೇನೆ. ನಾನು ಶಾಸಕನಾಗಿ, ಸಚಿವನಾಗಿ ಮಾಡಿದ ಕೆಲಸವೇ ನನಗೆ ಶ್ರೀರಕ್ಷೆ. ಅಭಿವೃದ್ಧಿ ನಿರೀಕ್ಷಿಸುತ್ತಿರುವ ಜನರು ಕಾಂಗ್ರೆಸ್ ಪರವಾಗಿ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸರ್ವ ಜಾತಿ, ಸಮುದಾಯಗಳ ಆಶೀರ್ವಾದ ಸಿಗುತ್ತಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.

ಹರಿಹರ (HARIHARA) ಕಾಂಗ್ರೆಸ್ ಟಿಕೆಟ್ (TICKET) ಇವತ್ತು ಇಲ್ಲವೇ ನಾಳೆ ಅಂತಿಮ ಆಗಬಹುದು. ಸಿದ್ದರಾಮಯ್ಯ, ಹೆಚ್. ಎಂ. ರೇವಣ್ಣ ಸೇರಿದಂತೆ ಯಾರು ಬರುತ್ತಾರೆ ಎಂಬುದು ಗೊತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರು ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾಕೆ ಸಿದ್ದರಾಮಯ್ಯರ ಹರಿಹರಕ್ಕೆ ಬರಬಾರದಾ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಸೈಡ್ ಲೈನ್ ಆಗುತ್ತಿರುವ ಬಿ. ಎಸ್. ಯಡಿಯೂರಪ್ಪರು ಮುಂದೊಂದು ದಿನ ಕಾಂಗ್ರೆಸ್ ಗೆ ಬರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ್ ಅವರಿಗೆ ಈಗಾಗಲೇ 75ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿದೆ ಎಂದು ಹೇಳುವ
ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ಯಡಿಯೂರಪ್ಪ ಅವರನ್ನು ಹೆದರಿಸಿ ಬಿಜೆಪಿಯವರು ತಾಳಕ್ಕೆ ತಕ್ಕಂತೆ ಕುಣಿಯುವಂತ ಗೊಂಬೆ ಮಾಡಿದ್ದಾರೆ. ಬಿಜೆಪಿಯಲ್ಲಿ ಹೆಚ್ಚಾಗಿ ಕೆಲ ಜಾತಿಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಕಾಂಗ್ರೆಸ್ ನಲ್ಲಿ ಎಲ್ಲ ಜಾತಿಗಳಿಗೂ ಆದ್ಯತೆ ಇದೆ ಎಂದು
ಹೇಳಿದ ಅವರು, ಪ್ರಲ್ಹಾದ್ ಜೋಶಿ ಅವರನ್ನು ಸಿಎಂ ಮಾಡುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment