ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭದ್ರಾ ಡ್ಯಾಂ ನೀರು ಕೊನೆ ಭಾಗಕ್ಕೆ ತಲುಪದಿರಲು ಸಚಿವರ ನಿರ್ಲಕ್ಷ್ಯ ಕಾರಣ: ಎಸ್. ಎಸ್. ಮಲ್ಲಿಕಾರ್ಜುನ್ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದ ಬಿ. ಪಿ. ಹರೀಶ್

On: March 2, 2024 6:57 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-03-2024

ದಾವಣಗೆರೆ: ಭದ್ರಾ ಡ್ಯಾಂ ನೀರು ದಾವಣಗೆರೆ ಜಿಲ್ಲೆಯ ರೈತರಿಗೆ ಸರಿಯಾಗಿ ಸಿಗುತ್ತಿಲ್ಲ. ಕೊನೆ ಭಾಗದ ರೈತರಿಗೆ ಸಿಗದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ‌. ಹರೀಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ದಾವಣಗೆರೆ ರೈತರಿಗೆ ನೀರು ಸಿಗುವಂತೆ ಮಾಡುವತ್ತ ಗಮನ ಹರಿಸಿಲ್ಲ. ಭದ್ರಾ ಜಲಾಶಯದ ನಾಲೆ ಹೊಂದಿರುವ ದಾವಣಗೆರೆ ಜಿಲ್ಲೆಗೆ ಸಚಿವರು ಭದ್ರ ಜಲಾಶಯದ ನೀರನ್ನು‌ಕೊನೆ ಭಾಗದ ಗ್ರಾಮಗಳಿಗೆ ನೀರು‌ ಮುಟ್ಟಿಸುವಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಭದ್ರಾ ಕಾಡಾ ಜವಾಬ್ದಾರಿಯನ್ನು ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಅವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರಿಗೆ ನೀಡಿದ್ದಾರೆ. ಆದರೆ ಸಚಿವ ಮಧು ಬಂಗಾರಪ್ಪ ‌ಅವರು ಶಿವಮೊಗ್ಗ ‌ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು‌ ಆರೋಪಿಸಿದರು.

ದಾವಣಗೆರೆ ಜಿಲ್ಲೆಯ ರೈತ ಬಗ್ಗೆ ಕಾಳಜಿ‌ ವಹಿಸಬೇಕಾಗಿದ್ದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್  ಜವಾಬ್ದಾರಿ ವಹಿಸಲಿಲ್ಲ. ಯಾವುದೇ ಹೋರಾಟ‌ ಮಾಡಲಿಲ್ಲ ಅವರಿಗೆ ಜಿಲ್ಲೆಯ‌ ರೈತರ ಹಿತ ಬೇಕಾಗಿಲ್ಲ ಎಂದರು.

ಶಿವಮೊಗ್ಗ ಜಿಲ್ಲೆಯ ರೈತರ ತೋಟ ಉಳಿಸಲು ಮಧು ಬಂಗಾರಪ್ಪ ಕ್ರಮ ತೆಗೆದುಕೊಂಡಿದ್ದಾರೆ. ಜಲಾಶಯದಲ್ಲಿ ಹೆಚ್ವು ನೀರು ಇರಬೇಕು ಎಂಬುದಾಗಿದೆ. ಹತ್ತು ದಿನ‌ನೀರು ಬಿಟ್ಟರೆ ನಮ್ಮ ತೋಟಕ್ಕೆ‌ ಸಾಕು‌.  ನೀರು ‌ನಿಲ್ಲಿಸಿದರೆ ಜಲಾಶಯದಲ್ಲಿ‌  ನೀರು ಉಳಿಯುತ್ತದೆ ಎಂಬ ಭಾವನೆ ಮೇಲ್ಬಾಗದ ರೈತರದ್ದಾಗಿದೆ. ಮೇಲ್ಬಾಗದ ರೈತರ ಉದ್ದೇಶಕ್ಕೆ ಮಧು‌ ಬಂಗಾರಪ್ಪ ಸ್ಪಂದಿಸಿದರು. ಆದರೆ ಎಸ್ ಎಸ್ ಮಲ್ಲಿಕಾರ್ಜುನ್  ರೈತ ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಗಮ ಮಂಡಳಿಗಳ‌ಪಟ್ಟಿ ಬಿಡುಗಡೆಯಾಗಿದೆ ಕಾಡಾ ಅಧ್ಯಕ್ಷ ಸ್ಥಾನ ಚಿಕ್ಕಮಗಳೂರಿಗೆ ಲಭಿಸಿದೆ ಇದರಿಂದ ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಕೇವಲ 12 ದಿನ‌ನೀರು ಬಿಟ್ಟರೆ ಕೊನೆ ಭಾಗಕ್ಕೆ ತಲುಪುವುದಿಲ್ಲ.ಕೊನೆ ಭಾಗದ ರೈತರ ನೋವಿಗೆ ಮಲ್ಲಿಕಾರ್ಜುನ್ ಕಾರಣ ಮುಂದಿನ ದಿನದಲ್ಲಿ‌ಇನ್ನೊಂದು ಬಾರಿ‌ ನೀರು ಹರಿಸಲಾಗುತ್ತದೆ. ಈ ವೇಳೆಯಾದರೂ ಎಸ್. ಎಸ್. ಮಲ್ಲಿಕಾರ್ಜುನ್  ಅವರು, ಭದ್ರಾ ಜಲಾಶಯದಿಂದ ನೀರು ಹರಿಸಲು‌ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಎಸ್ ಎಸ್ ಎಂ ಕೊನೆ ಭಾಗದ ರೈತರ ಕಷ್ಟಕ್ಕೆ ಸ್ಪಂದಿಸದಿರುವುದನ್ನು ನೋಡಿದರೆ ಮಲ್ಲಿಕಾರ್ಜುನ್ ಅವರ ಕೈಗಾರಿಕೆ ಇದರಿಂದ ಲಾಭ ಇದೆಯೇ ಎನಿಸುತ್ತದೆ. ಸಚಿವರಿಗೆ‌ ಬಡ ರೈತನಿಗಿಂತ ಕಾರ್ಖಾನೆ ಮುಖ್ಯವೇ ಎನಿಸುತ್ತದೆ. ಯಾವ ಸಂದರ್ಭದಲ್ಲಿ ಕೂಡ ಎಸ್ ಎಸ್ ಎಂ  ಮಧು ಬಂಗಾರಪ್ಪಗೆ ಒತ್ತಡ ಹಾಕಲಿಲ್ಲ‌ ಎಂದು ಆರೋಪಿಸಿದರು.

ಸರ್ಕಾರ ಬಜೆಟ್ ಅಧಿವೇಶನ ನಡೆಸಿದ ವೇಳೆ ಬರಗಾಲದ ಬಗ್ಗೆ ಕುಡಿಯುವ ನೀರಿನ‌ ವಿಚಾರವಾಗಿ ಮಾತನಾಡಲಿಲ್ಲ. ಕಾಂಗ್ರೆಸ್ ‌ಜನರ ಜೀವ ಉಳಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿತು. ಸದನ ಪೂರ್ತಿ ಕಾಂಗ್ರೆಸ್ ನವರು ಕೇಂದ್ರದ ಮೇಲೆ ಘರ್ಷಣೆ ಮಾಡುವ ರೀತಿಯಲ್ಲಿ ಮಾತನಾಡಿದ್ದು  ಖಂಡನೀಯ. ನೊಂದಿರುವ ಬಡ ರೈತರು ‌ಸಾರ್ವಜನಿಕರಿಗೆ ಉಪಯೋಗ ವಿಲ್ಲದ ಅಭಿವೃದ್ಧಿ ‌ಶೂನ್ಯ ಬಜೆಟ್ ಇದಾಗಿತ್ತು..ಮಧ್ಯ‌ಕರ್ನಾಟಕ್ಕೆ ಯಾವ ಕೊಡುಗೆ ನೀಡಿಲ್ಲ. ಈ‌ ಭಾಗದ ಸಚಿವರು ಶಾಸಕರು‌  ಸರ್ಕಾರಕ್ಕೆ ಒತ್ತಡ ಹಾಕಿಲ್ಲ ಎಂದರು.

ದಲಿತರ ಹಣ ಬೇರೆ ಯೋಜನೆಗೆ ನೀಡುತ್ತಿದ್ದಾರೆ. ರಾಜ್ಯ ಸಭೆ‌ಚುನಾವಣೆ ಗೆದ್ದ ಕಾಂಗ್ರೆಸ್ ಅಭ್ಯರ್ಥಿ‌ ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ.ಪತ್ರಕರ್ತರು ಈ‌ ಬಗ್ಗೆ ಪ್ರಶ್ನೆ ಮಾಡಿದರೆ ಹೆದರಿಸುತ್ತಾರೆ ಘೋಷಣೆ ಕೂಗಿದ ಬಗ್ಗೆ ವರದಿ ಪಡೆಯುವುದಾಗಿ ಹೇಳುತ್ತಾರೆ ಆದರೆ ಬ್ಯಾಡಗಿಯಲ್ಲಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.ಕಾಂಗ್ರೆಸ್ ನವರು ದುಷ್ಟ ಶಕ್ತಿಗಳಿಗೆ ಪ್ರೋತ್ಸಾಹ ‌ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಮತ‌ಕ್ಕಾಗಿ ಬಹು ಸಂಖ್ಯಾತರಿಗೆ ಮೋಸ ಮಾಡಲು‌ ಹೊರಟಿದ್ದಾರೆಂದರು.

ಬೆಂಗಳೂರಿನ‌  ರಾಮೇಶ್ವರ ಕೆಫೆ‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವುದು ಸರ್ಕಾರದ ಬೇಜವಾಬ್ದಾರಿತನದಿಂದ ಶಾಂತಿ ಸೌಹಾರ್ದತೆಯಿಂದ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ‌ ವೆಸ್ಟ್ ಬೆಂಗಾಲ್ ಆಗುತ್ತಿದೆ.ಈ ಎಲ್ಲಾ ವಿಚಾರ ಖಂಡನೀಯ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಿ. ಎಂ. ಸತೀಶ್, ಹೆಚ್. ಪಿ. ವಿಶ್ವಾಸ್, ಕ್ರೋಟೇಶ್ ಗೌಡ ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment