SUDDIKSHANA KANNADA NEWS/ DAVANAGERE/ DATE:12-10-2024
ಲಲಿತ್ ಪುರ: ಉತ್ತರ ಪ್ರದೇಶದ ಲಲಿತ್ಪುರದ ತಂದೆಯನ್ನು ತನ್ನ 10 ವರ್ಷದ ಮಗಳನ್ನು ಹಗ್ಗದಿಂದ ತಲೆಕೆಳಗಾಗಿ ಬಿಗಿದು ಥಳಿಸಿದ್ದಕ್ಕಾಗಿ ಬಂಧಿಸಲಾಗಿದೆ. ತನ್ನ ಮಾತು ಕೇಳದ ಮಗಳಿಗೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಗೋವಿಂದ್ ರೈ ರೈಕ್ವಾರ್ ಎಂಬಾತನೇ ಪುತ್ರಿಗೆ ಹಿಂಸೆ ನೀಡಿದ ನಿಷ್ಕರುಣಿ ತಂದೆ. ಬಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ರಾಜಾ ದಿನೇಶ್ ಸಿಂಗ್ ಅವರು ಘಟನೆ ಬಗ್ಗೆ ಮಾತನಾಡಿದ್ದು, ತಂದೆ ಗೋವಿಂದ್ ರೈ ರೈಕ್ವಾರ್ ತನ್ನ ಮಗಳಿಗೆ ತನ್ನ ಮಾತನ್ನು ಪಾಲಿಸದ ಕಾರಣಕ್ಕೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು ವೈರಲ್ ಆಗಿದೆ, ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆರೋಪಿ ತಂದೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.