Home ದಾವಣಗೆರೆ ದಿನಕ್ಕೆ ₹50 ದುಡಿಯುತ್ತಿದ್ದ ಹಂತದಿಂದ ₹4,000 ಕೋಟಿಯ ‘ರಾಮಾಯಣ’ ಚಿತ್ರದವರೆಗೆ: ರಾಕಿಂಗ್ ಸ್ಟಾರ್ ಯಶ್ ಸ್ಫೂರ್ತಿದಾಯಕ ಪಯಣ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ದಿನಕ್ಕೆ ₹50 ದುಡಿಯುತ್ತಿದ್ದ ಹಂತದಿಂದ ₹4,000 ಕೋಟಿಯ ‘ರಾಮಾಯಣ’ ಚಿತ್ರದವರೆಗೆ: ರಾಕಿಂಗ್ ಸ್ಟಾರ್ ಯಶ್ ಸ್ಫೂರ್ತಿದಾಯಕ ಪಯಣ!

Share
ಯಶ್
Share

ಬೆಂಗಳೂರು: ಚಿತ್ರರಂಗದಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೆ ಬಂದ ಒಬ್ಬ ಸಾಮಾನ್ಯ ಹುಡುಗ ಇಂದು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ‘ಪ್ಯಾನ್ ಇಂಡಿಯಾ’ ಸೂಪರ್‌ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.

ಹೌದು, ಕೇವಲ 300 ರೂಪಾಯಿ ಹಿಡಿದುಕೊಂಡು ನಟನಾಗಬೇಕೆಂಬ ಒಂದೇ ಕನಸಿನಿಂದ 16ನೇ ವಯಸ್ಸಿನಲ್ಲಿ ಮನೆ ತೊರೆದು ಬಂದಿದ್ದ ಕೆಜಿಎಫ್ ನಾಯಕ ಯಶ್ ಅವರ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.

ಆರಂಭಿಕ ದಿನಗಳ ಕಠಿಣ ಹೋರಾಟ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ ಚಾಲಕ ಅರುಣ್ ಕುಮಾರ್ ಹಾಗೂ ಗೃಹಿಣಿ ಪುಷ್ಪಾ ಅವರ ಪುತ್ರನಾದ ಯಶ್, ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಪಟ್ಟ ಶ್ರಮ ಸಣ್ಣದದಲ್ಲ. ರಂಗಭೂಮಿ ಹಾಗೂ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಬ್ಯಾಕ್‌ಸ್ಟೇಜ್‌ನಲ್ಲಿ ಚಹಾ ಪೂರೈಸಿ ದಿನಕ್ಕೆ ಕೇವಲ 50 ರೂಪಾಯಿ ದುಡಿಯುತ್ತಿದ್ದ ದಿನಗಳಿದ್ದವು. ನಂತರ 2004ರಲ್ಲಿ ‘ಉತ್ತರಾಯಣ’ ಹಾಗೂ ‘ನಂದಗೋಕುಲ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರವೇಶಿಸಿದ ಇವರು, 2007ರಲ್ಲಿ ‘ಜಂಬದ ಹುಡುಗಿ’ ಚಿತ್ರದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದರು.

‘ಕೆಜಿಎಫ್’ ತಂದಿಟ್ಟ ಜಾಗತಿಕ ಯಶಸ್ಸು:

ಮೊಗ್ಗಿನ ಮನಸು’, ‘ಗೂಗ್ಲಿ’, ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಯಶ್ ಅವರಿಗೆ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಜಾಗತಿಕ ಮಟ್ಟದ ಖ್ಯಾತಿ ತಂದುಕೊಟ್ಟವು. ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹1,200 ಕೋಟಿಗೂ ಅಧಿಕ ಗಳಿಕೆ ಕಂಡು ಯಶ್ ಭಾರತದ ಅತ್ಯಂತ ಭರವಸೆಯ ನಟರ ಸಾಲಿಗೆ ಸೇರಿದರು.

ಈಗ ಭಾರತೀಯ ಚಿತ್ರರಂಗದ ಬಿಗ್ಗೆಸ್ಟ್ ಪ್ರಾಜೆಕ್ಟ್‌ಗಳಲ್ಲಿ ಯಶ್:

ಪ್ರಸ್ತುತ ಯಶ್ ತಮ್ಮ ವೃತ್ತಿಜೀವನದ ಅತ್ಯಂತ ದುಬಾರಿ ಹಂತದಲ್ಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಸುಮಾರು ₹500 ಕೋಟಿ ಬಜೆಟ್‌ನ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ನಮಿತ್ ಮಲ್ಹೋತ್ರಾ ಮತ್ತು ನಿತೇಶ್ ತಿವಾರಿ ಅವರ ಸುಮಾರು ₹4,000 ಕೋಟಿ ನಿರ್ಮಾಣ ವೆಚ್ಚದ ಬೃಹತ್ ಪ್ರಾಜೆಕ್ಟ್ ‘ರಾಮಾಯಣ’ ಚಿತ್ರದಲ್ಲಿ ‘ರಾವಣ’ನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಲ್ಲದೆ, ಸಹ-ನಿರ್ಮಾಪಕರಾಗಿಯೂ ಭಾಗಿಯಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *