SUDDIKSHANA KANNADA NEWS/ DAVANAGERE/ DATE:05-01-2024
ದಾವಣಗೆರೆ: ರಾಜ್ಯದಲ್ಲಿ ಹಿಂದೂಗಳ ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಡಳಿತ ನಡೆಸುತ್ತಿದೆ. ನಿಮಗೆ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ. ಅದೆಷ್ಟು ಹೆಚ್ಚು ಜೈಲುಗಳನ್ನು ಮಾಡುತ್ತೀರೋ ನೋಡೋಣ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಕೆಣಕಿದರೆ, ಸುಖಾಸುಮ್ಮನೆ ತೊಂದರೆ ಕೊಟ್ಟರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹಿಂದೂಗಳು ದಂಗೆ ಏಳುವ ದಿನಗಳ ದೂರ ಇಲ್ಲ. ಗೋ ಶಾಪ, ಹಿಂದುತ್ವದ ಶಾಪದಿಂದ ಕಾಂಗ್ರೆಸ್ ನ ಪಕ್ಷದವರಿಂದಲೇ ಸರ್ಕಾರ ಬಿದ್ದು ಹೋಗುತ್ತದೆ. ಹಿಂದುತ್ವದ ಪರ, ಕಾನೂನಿನ ಪರವಾಗಿ ಇರುವವರ ವಿರುದ್ಧ ಇರುವ ಸರ್ಕಾರ. ಹಿಂದೂಗಳ ಭಾವನೆಗಳಿಗೆ ವಿರುದ್ಧವಾಗಿರುವ ಸರ್ಕಾರ. ಇದೇ ಧೋರಣೆ ಮುಂದುವರಿಸಿದರೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಹಿಂದೂ ವಿರೋಧಿ ಧೋರಣೆ ತಾಳಲು ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಎಂಎಲ್ ಸಿ ಬಿ. ಕೆ. ಹರಿಪ್ರಸಾದ್ ಸೇರಿದಂತೆ ಹಲವರು ಪ್ರಯತ್ನ ಮಾಡುತ್ತಿರುವ ಭಾಗವೂ ಆಗಿರಬಹುದು. ವಿಧಾನಸೌಧವನ್ನು ಬೇಕಾದರೆ ಮುಸ್ಲಿಂರಿಗೆ ಕಾಂಗ್ರೆಸ್ ನವರು ಬರೆದುಕೊಡುತ್ತಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
ಆಂಜನೇಯ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ ಎಂದು ಒಳ್ಳೆಯ ಹೆಸರು ಇಟ್ಟಿದ್ದಾರೆ. ಆದ್ರೆ, ರಾವಣಸುರರಂತೆ ವರ್ತಿಸುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಆಡಳಿತ ನಡೆಸುವ ಬದಲು ವಿರುದ್ಧವಾಗಿ ಆಡಳಿತ ಕೊಡುತ್ತಿದ್ದಾರೆ. ಯತೀಂದ್ರ ಸಿದ್ದರಾಮಯ್ಯ, ಆಂಜನೇಯ ಸೇರಿದಂತೆ ಸಚಿವರು ಕ್ಷುಲ್ಲಕ ಹೇಳಿಕೆ, ಪ್ರಚೋದನಕಾರಿ ಮಾತು ಆಡುತ್ತಿದ್ದಾರೆ. ಹಿಂದುತ್ವ ರಕ್ಷಣೆ ಮಾಡುವವರು ಕ್ರಿಮಿನಲ್ಸ್ ಎಂದು ಹೇಳುತ್ತಿದ್ದಾರೆ. ಡಿಜೆಹಳ್ಳಿ, ಕೆಜಿಹಳ್ಳಿ ಗಲಾಟೆ, ಪಿಎಫ್ಐ, ಎಸ್ ಡಿಪಿಐ ಕೇಸ್ ವಾಪಸ್ ಪಡೆಯುತ್ತಿದ್ದೀರಿ. ಭಯೋತ್ಪಾದಕರ ಪರ ಕೆಲಸ ಮಾಡುತ್ತಿರುವುದರಿಂದಲೇ ಭಯೋತ್ಪಾದನೆ ಅಟ್ಟಹಾಸ ಹೆಚ್ಚಾಗಲು ಕಾರಣವಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಟಿ. ಜಿ. ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ. ಜೆ. ಅಜಯ್ ಕುಮಾರ್, ಬಿಜೆಪಿ ಮುಖಂಡರಾದ ಕಲ್ಲಿಂಗಪ್ಪ, ತಂದೂರು ದಯಾನಂದ್, ಚಂದ್ರು, ಪ್ರತಾಪ್, ಚಂದ್ರು ಪಾಟೀಲ್, ಅಣಜಿ ಬಸವರಾಜ್ ಮತ್ತಿತರರು ಹಾಜರಿದ್ದರು.