ನವದೆಹಲಿ: ಮುಂಬೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೊಲೀಸರ ವ್ಯಾನ್ ತಡೆದು ದೇಶದ ಗಮನ ಸೆಳೆದಿದ್ದ ಮಾಡೆಲ್ ರಿಯಾ ಆಹಿರ್, ಇದೀಗ ತಮ್ಮ ವಿರುದ್ಧ ತೀವ್ರ ಸೈಬರ್ ಕಿರುಕುಳ ಹಾಗೂ ಹಲ್ಲೆ ಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಯಾ ಆಹಿರ್, ಪ್ರತಿಭಟನೆಯ ನಂತರ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳುಮಟ್ಟದ ಹಾಗೂ ನಿಂದನೀಯ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದರು.
“ನನ್ನನ್ನು ಕೇವಲ ‘ವೈರಲ್ ಗರ್ಲ್’ ಎಂದು ಕರೆಯಬೇಡಿ. ಅಕ್ರಮವಾಗಿ ಬಂಧನಕ್ಕೊಳಗಾಗುತ್ತಿದ್ದ 20 ವಿದ್ಯಾರ್ಥಿಗಳನ್ನು ರಕ್ಷಿಸಿದ ಹುಡುಗಿ ನಾನು. ಮಾಧ್ಯಮಗಳು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ನನ್ನ ವಿರುದ್ಧ ನಡೆಯುತ್ತಿರುವುದು ಸಾಧಾರಣ ಟ್ರೋಲಿಂಗ್ ಅಲ್ಲ, ಇದೊಂದು ಗಂಭೀರ ಅಪರಾಧ. ರಾಜಕೀಯ ಪಕ್ಷದ ಕಾರ್ಯಕರ್ತರೂ ನನ್ನ ವಿರುದ್ಧ ಚಾರಿತ್ರ್ಯ ಹರಣ ಮಾಡುವ ಕೀಳುಮಟ್ಟದ ಕಾಮೆಂಟ್ ಹಾಗೂ ಪೋಸ್ಟ್ ಮಾಡುತ್ತಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜುಲೈ 27 ರಂದೇ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಆಗಸ್ಟ್ 5 ರವರೆಗೂ ಯಾವುದೇ ಎಫ್‌ಐಆರ್ (FIR) ದಾಖಲಾಗಿಲ್ಲ ಎಂದು ರಿಯಾ ಆರೋಪಿಸಿದರು.
ರಾಹುಲ್ ಗಾಂಧಿ ಬೆಂಬಲ: ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ಬೆದರಿಸಲು ಮತ್ತು ಧಮನ ಮಾಡಲು ಸರ್ಕಾರ ಯತ್ನಿಸುತ್ತಿದೆ” ಎಂದು ಕಿಡಿಕಾರಿದರು.
- Mumbai Police Van Protest
- Mumbai Student Demonstration
- NEET paper leak protest
- Online Harassment
- Rahul Gandhi Student Protest
- Rhiya Ahir
- Rhiya Ahir Cyber Bullying
- Rhiya Ahir FIR Complaint
- Rhiya Ahir Press Conference
- Student Protest Mumbai
- ಪೊಲೀಸ್ ವ್ಯಾನ್ ತಡೆದ ಮಾಡೆಲ್
- ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ
- ಮುಂಬೈ ವಿದ್ಯಾರ್ಥಿ ಪ್ರತಿಭಟನೆ
- ಮುಂಬೈ ಸುದ್ದಿ
- ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ
- ರಿಯಾ ಆಹಿರ್
- ರಿಯಾ ಆಹಿರ್ ಎಫ್‌ಐಆರ್
- ರಿಯಾ ಆಹಿರ್ ಸೈಬರ್ ಕಿರುಕುಳ





Leave a comment