SUDDIKSHANA KANNADA NEWS/ DAVANAGERE/ DATE:04-03-2025
ಪುಣೆ: 19 ವರ್ಷದ ಯುವತಿಯ ಮೇಲೆ 20 ವರ್ಷದ ಇಬ್ಬರು ಯುವಕರು ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಆಕೆ ಚಿಕ್ಕಪ್ಪನಿಗೆ ಮುಂದೆಯೇ ಈ ಕೃತ್ಯ ಎಸಗಿದ್ದಾರೆ. ಚಾಕು ತೋರಿಸಿ ಬಳಿಕ ಬಂಗಾರದ ಒಡವೆಗಳನ್ನು ದೋಚಿದ ಘಟನೆ
ವರದಿಯಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಇಬ್ಬರು ಯುವಕರು 19 ವರ್ಷದ ಯುವತಿಯ ಮೇಲೆ ಚಿಕ್ಕಪ್ಪನ ಎದುರು ಚಾಕು ತೋರಿಸಿ ಅತ್ಯಾಚಾರ ಎಸಗಿ, ದರೋಡೆ ಮಾಡಿದ್ದಾರೆ. ಶನಿವಾರ ತಡರಾತ್ರಿ ಸಂತ್ರಸ್ತೆಯ ಮನೆಯ ಬಳಿ ಈ ಘಟನೆ ನಡೆದಿದೆ.
ಅಮೋಲ್ ಪೋಟೆ, ಕಿಶೋರ್ ಕಾಳೆ ಆರೋಪಿಗಳು ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಯುವತಿ ಮತ್ತು ಆಕೆ ಚಿಕ್ಕಪ್ಪ ಮನೆಯ ಸಮೀಪವಿರುವ ಏಕಾಂತ ಸ್ಥಳದಲ್ಲಿ ಒಟ್ಟಿಗೆ ಕುಳಿತಿದ್ದಾಗ ಈ ಘಟನೆ ನಡೆದಿದೆ.
20ರ ಹರೆಯದ ಇಬ್ಬರು ಯುವಕರು ಮೋಟಾರ್ ಬೈಕ್ನಲ್ಲಿ ಬಂದು ಇಬ್ಬರಿಗೂ ಚಾಕು ತೋರಿಸಿ ಬೆದರಿಸಿದ್ದಾರೆ. ಅವರು ತಮ್ಮ ಫೋನ್ನಲ್ಲಿ ಅತ್ಯಾಚಾರ ನಡೆಸುವುದನ್ನು ಚಿತ್ರೀಕರಿಸಿದ್ದಾರೆ. ನಂತರ ಆರೋಪಿಗಳು ಸರದಿಯಂತೆ ಯುವತಿ ಮೇಲೆ
ಅತ್ಯಾಚಾರ ಎಸಗಿ, ಆಕೆಯ ಚಿನ್ನದ ಮೂಗುತಿ ಮತ್ತು ಚಿನ್ನದ ಪೆಂಡೆಂಟ್ ಅನ್ನು ದೋಚಿದ್ದಾರೆ, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ” ಎಂದು ರಂಜನ್ಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಮಹಾದೇವ್
ವಾಘ್ಮೋಡೆ ಹೇಳಿದ್ದಾರೆ.
ಇಬ್ಬರು ಆರೋಪಿಗಳನ್ನು ಅಮೋಲ್ ನಾರಾಯಣ್ ಪೋಟೆ (25) ಮತ್ತು ಕಿಶೋರ್ ರಂಭಾವು ಕಾಳೆ (29) ಎಂದು ಗುರುತಿಸಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.