Home ದಾವಣಗೆರೆ ‘ರಾಮಾಯಣ’ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ: ರಣಬೀರ್, ಯಶ್ ನಟನೆಗೆ ಫ್ಯಾನ್ಸ್ ಫಿದಾ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ರಾಮಾಯಣ’ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ: ರಣಬೀರ್, ಯಶ್ ನಟನೆಗೆ ಫ್ಯಾನ್ಸ್ ಫಿದಾ!

Share
ರಾಮಾಯಣ
Share

ನವದೆಹಲಿ: ನಿಶ್ತಿಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಲನಚಿತ್ರ ಇಂದು ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಸಾಮಾಜಿಕ ಜಾಲತಾಣ ‘X’ ನಲ್ಲಿ (ಟ್ವಿಟರ್) ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಬ್ರಹ್ಮಾಂಡ ಮಟ್ಟದ ಮೇಕಿಂಗ್, ದೃಶ್ಯ ವೈಭವ, ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ನೀಡಿದ ಹಿನ್ನೆಲೆ ಸಂಗೀತ ಮತ್ತು ನಟರ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ.

ಶ್ರೀರಾಮನ ಪಾತ್ರದಲ್ಲಿ ಅಭಿನಯಿಸಿರುವ ರಣಬೀರ್ ಕಪೂರ್ ಹಾಗೂ ರಾವಣನಾಗಿ ಅಬ್ಬರಿಸಿರುವ ರಾಕಿ ಭಾಯ್ ಯಶ್ ಅಭಿನಯ ಈಗ ಚಿತ್ರರಂಗದಲ್ಲಿ ಪ್ರಮುಖ ಚರ್ಚಾವಿಷಯವಾಗಿದೆ.

ರಣಬೀರ್ ಕಪೂರ್ ಆಯ್ಕೆಯನ್ನು ಪ್ರಶ್ನಿಸಿದ್ದವರಿಗೆ ಅವರ ಅಭಿನಯವೇ ತಕ್ಕ ಉತ್ತರ ನೀಡಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾವಣನಾಗಿ ಯಶ್ ಮೊದಲ ದೃಶ್ಯದಿಂದಲೇ ಪ್ರೇಕ್ಷಕರನ್ನು ಕಟ್ಟಿಹಾಕಿದ್ದು, ಜಟಾಯು ಸನ್ನಿವೇಶದಲ್ಲಿ ಅವರ ಅಭಿನಯ ಅತ್ಯದ್ಭುತವಾಗಿ ಮೂಡಿಬಂದಿದೆ.

ದೃಶ್ಯ ವೈಭವ ಹಾಗೂ VFX: ಹಾಲಿವುಡ್ ಶೈಲಿಯ ಮೇಕಿಂಗ್ ಮತ್ತು ಗ್ರಾಫಿಕ್ಸ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಜಟಾಯು ಸನ್ನಿವೇಶ : ಚಿತ್ರದ ಕೊನೆಯ ಭಾಗದಲ್ಲ ಬರುವ ಜಟಾಯು ಕಾಳಗದ ದೃಶ್ಯವು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಲಿದ್ದು, ಕಥೆಗೆ ಭಾವುಕ ಸ್ಪರ್ಶ ನೀಡಿದೆ.

ಸಂಗೀತ ಯಾನ: ಹ್ಯಾನ್ಸ್ ಜಿಮ್ಮರ್ ಹಿನ್ನೆಲೆ ಸಂಗೀತ ಚಿತ್ರದ ಪ್ರತಿಯೊಂದು ದೃಶ್ಯಕ್ಕೂ ಜೀವ ತುಂಬಿದ್ದು, ಐಮ್ಯಾಕ್ಸ್ (IMAX) ಅನುಭವಕ್ಕೆ ಹೇಳಿಮಾಡಿಸಿದಂತಿದೆ.

ಪಾತ್ರವರ್ಗ: ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಹಾಗೂ ದಶರಥನಾಗಿ ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ಆದಾಗ್ಯೂ, 3 ಗಂಟೆ 15 ನಿಮಿಷಗಳ ಸುದೀರ್ಘ ಅವಧಿ ಹೊಂದಿರುವ ಈ ಚಿತ್ರದ ಕೆಲ ಸನ್ನಿವೇಶಗಳು ತುಸು ನಿಧಾನವೆನಿಸುತ್ತವೆ ಮತ್ತು ರಾಮ-ಸೀತೆ ನಡುವಿನ ಭಾವುಕ ಬಾಂಧವ್ಯ ಇನ್ನು ಕೊಂಚ ಗಟ್ಟಿಯಾಗಿರಬಹುದಿತ್ತು ಎಂದು ಕೆಲ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ, ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಭಾಗ-2 (Sequel) ಮೇಲಿನ ನಿರೀಕ್ಷೆಗಳು ಈಗ ಮತ್ತಷ್ಟು ದುಪ್ಪಟ್ಟಾಗಿವೆ.

Share

Leave a comment

Leave a Reply

Your email address will not be published. Required fields are marked *