Home ದಾವಣಗೆರೆ ಪಾಕಿಸ್ತಾನದಲ್ಲೂ ‘ರಾಮಾಯಣ’ ಸಿನಿಮಾ ಕ್ರೇಜ್: ಕರಾಚಿಯಲ್ಲಿ ಸಂಭ್ರಮಿಸಿದ ಹಿಂದೂ ಬಾಂಧವರು, ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂಬ ಹಾರೈಕೆ!
ದಾವಣಗೆರೆಬೆಂಗಳೂರುಸಿನಿಮಾ

ಪಾಕಿಸ್ತಾನದಲ್ಲೂ ‘ರಾಮಾಯಣ’ ಸಿನಿಮಾ ಕ್ರೇಜ್: ಕರಾಚಿಯಲ್ಲಿ ಸಂಭ್ರಮಿಸಿದ ಹಿಂದೂ ಬಾಂಧವರು, ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂಬ ಹಾರೈಕೆ!

Share
ರಾಮಾಯಣ
Share

ಮುಂಬೈ / ಕರಾಚಿ: ನಿಖಿಲ್ ತಿವಾರಿ ನಿರ್ದೇಶನದ ಹಾಗೂ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತ ಮಾತ್ರವಲ್ಲದೆ ನೆರೆದೇಶ ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂ ಸಮುದಾಯವು ಈ ಚಿತ್ರದ ಬಿಡುಗಡೆಯನ್ನು ಸಂಭ್ರಮದಿಂದ ಆಚರಿಸಿದ್ದು, ಸಿನಿಮಾಕ್ಕೆ ಶುಭಕೋರಿದೆ.

ಯೂಟ್ಯೂಬರ್ ಸುಮಿತ್ ಚಂದ್ರ ಅವರು ಕರಾಚಿಯ ದೇವಸ್ಥಾನವೊಂದರಲ್ಲಿ ಸ್ಥಳೀಯ ಹಿಂದೂಗಳು ರಾಮಾಯಣ ಚಿತ್ರದ ಪೋಸ್ಟರ್‌ಗಳನ್ನು ಹಾಕಿ, ಹಾಡುಗಳನ್ನು ಹಾಡುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನಿ ಹಿಂದೂಗಳಿಗೆ ರಾಮಾಯಣವು ಕೇವಲ ಒಂದು ಚಲನಚಿತ್ರವಲ್ಲ, ಅದು ನಮ್ಮ ಸಾಂಸ್ಕೃತಿಕ ಅಸ್ಮಿತೆ ಮತ್ತು ಪರಂಪರೆಯ ಸಂಕೇತವಾಗಿದೆ ಎಂದು ಅಲ್ಲಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ ಭಾರಿ ಯಶಸ್ಸು ಗಳಿಸಲಿ ಹಾಗೂ ‘ಆಸ್ಕರ್’ (Oscar) ಪ್ರಶಸ್ತಿ ಗೆಲ್ಲಲಿ ಎಂದು ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ನಿರ್ದೇಶಕ ನಿತೀಶ್ ತಿವಾರಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಪಾಕಿಸ್ತಾನದಲ್ಲಿ ಆಚರಣೆ: ಕರಾಚಿಯ ದೇವಸ್ಥಾನದಲ್ಲಿ ರಾಮಾಯಣ ಚಿತ್ರದ ಪೋಸ್ಟರ್ ಹಾಕಿ, ವಿಶೇಷ ಹಾಡುಗಳ ಮೂಲಕ ಹಿಂದೂ ಸಮುದಾಯದವರಿಂದ ಬಿಡುಗಡೆ ಪೂರ್ವ ಸಂಭ್ರಮಾಚರಣೆ.

ಚಿತ್ರದ ಬಿಡುಗಡೆ ದಿನಾಂಕ: ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಮಹಾಕಾವ್ಯ ಆಧಾರಿತ ಚಿತ್ರವು ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಭಾಗವು 2026ರ ನವೆಂಬರ್ 5 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾರಾಗಣ: ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕೆಜಿಎಫ್ ಖ್ಯಾತಿಯ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಈ ಚಿತ್ರದ ಅಧಿಕೃತ ಬಿಡುಗಡೆಯ ಕುರಿತು ಇನ್ನು ಯಾವುದೇ ದೃಢೀಕರಣ ಲಭಿಸಿಲ್ಲವಾದರೂ, ಅಲ್ಲಿನ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ಕ್ರೇಜ್ ಮುಗಿಲು ಮುಟ್ಟಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles