Home ಕ್ರೈಂ ನ್ಯೂಸ್ ಬೋಟ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ಯಾರು? ಗಿರಿರಾಜ್ ಸಿಂಗ್ ಸಸ್ಪೆನ್ಸ್ ಪೋಸ್ಟ್‌ಗೆ ಕಾಂಗ್ರೆಸ್ ಸ್ಪಷ್ಟನೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬೋಟ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ಯಾರು? ಗಿರಿರಾಜ್ ಸಿಂಗ್ ಸಸ್ಪೆನ್ಸ್ ಪೋಸ್ಟ್‌ಗೆ ಕಾಂಗ್ರೆಸ್ ಸ್ಪಷ್ಟನೆ!

Share
ರಾಹುಲ್ ಗಾಂಧಿ
Share

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವೈರಲ್ ಫೋಟೋವೊಂದು ಈಗ ದೇಶದ ರಾಜಕೀಯ ಅಖಾಡದಲ್ಲಿ ಹೊಸ ಸಂಚಲನ ಮೂಡಿಸಿದೆ.

ಬೋಟ್‌ನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಹಿಳೆ ಹಾಗೂ ಮಗುವೊಂದು ಇರುವ ಫೋಟೋವನ್ನು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, “ರಾಹುಲ್ ಜಿ, ಈ ಫೋಟೋ ಎಲ್ಲಿ ಮತ್ತು ಯಾವಾಗ ತೆಗೆದಿದ್ದು? ನಿಮ್ಮ ಜೊತೆ ಇರುವವರು ಯಾರು? ತಿಳಿದುಕೊಳ್ಳಲು ನನಗೆ ಕುತೂಹಲವಿದೆ” ಎಂದು ಸಸ್ಪೆನ್ಸ್ ಸೃಷ್ಟಿಸಿದ್ದರು.

ಗಿರಿರಾಜ್ ಸಿಂಗ್ ಅವರ ಈ ಪೋಸ್ಟ್‌ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ಮಾತನಾಡಿ, “ಫೋಟೋದಲ್ಲಿರುವ ಮಹಿಳೆ ಮತ್ತು ಮಗು ರಾಹುಲ್ ಗಾಂಧಿ ಅವರ ಸ್ನೇಹಿತನ ಹೆಂಡತಿ ಮತ್ತು ಮಗ. ಅವರು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದಾಗ ತೆಗೆದ ಫೋಟೋ ಇದು” ಎಂದು ಹೇಳಿದ್ದಾರೆ. ಅಲ್ಲದೆ, ಗಿರಿರಾಜ್ ಸಿಂಗ್ ಅವರ ಮಾನಸಿಕತೆಯನ್ನು ತೀವ್ರವಾಗಿ ತೊಳೆಯುವ ಮೂಲಕ ವಿಕೃತ ಆಲೋಚನೆಗಳಿಂದ ಹೊರಬನ್ನಿ ಎಂದು ತಿರುಗೇಟು ನೀಡಿದ್ದಾರೆ.

ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಮುಖಂಡ ರವಿ ದಂಡಿಯಾ ಈ ಫೋಟೋ ಅಮೆರಿಕದ ಟೆಕ್ಸಾಸ್‌ನಲ್ಲಿರುವ ‘ಲೇಕ್ ರೇ ರಾಬರ್ಟ್ಸ್’ ಎಂಬಲ್ಲಿ ತೆಗೆದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಮುಖಂಡರು ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ವೆಚ್ಚ ಮತ್ತು ಭದ್ರತಾ ನಿಯಮಗಳ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *