SUDDIKSHANA KANNADA NEWS/ DAVANAGERE/ DATE:23-01-2025
ದಾವಣಗೆರೆ: ಇದೇ ತಿಂಗಳು ಪುದುಚೇರಿಯಲ್ಲಿ ನಡೆಯುವ 14 ವರ್ಷದೊಳಗಿನವರ ದಕ್ಷಿಣವಲಯ ದ ಟೂರ್ನ್ ಮೆಂಟ್ ನಲ್ಲಿ ದಾವಣಗೆರೆ ಕ್ರಿಕೆಟ್ ಕ್ಲಬ್ ನ ಪ್ರತಿಭೆ ಶಿವರಾಜ್ ಆರ್. ಆಡಲಿದ್ದಾರೆ.
ಶಿವರಾಜ್ ಆರ್. ಜೈನ್ ವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿ.
ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗುವುದಕ್ಕೂ ಮುನ್ನ ಶಿವರಾಜ್ ರಾಜ್ಯ ಸಂಸ್ಥೆ ನಡೆಸಿರುವ ಎಲ್ಲಾ ಪಂದ್ಯಾವಳಿಗಳಲ್ಲಿ ದಾಖಲೆಯ ರನ್ ಗಳಿಸಿದ್ದು, 1000 ರನ್ ಕೇವಲ 9 ಪಂದ್ಯಾವಳಿಗಳಿಂದ ಪೂರೈಸಿದ್ದಾರೆ. ಇದರಲ್ಲಿ 6 ಶತಕ ಬಂದಿದೆ. ಶಿವರಾಜ್ ಅತ್ಯಧಿಕ ಮೊತ್ತ 165* ಅಜೇಯ, ಮಂಗಳೂರು ವಲಯ , ಮೈಸೂರು ವಲಯ144, ಧಾರವಾಡ ವಲಯ 119, ಕಂಬೈನ್ಡ್ ಸಿಟಿ 113, 79*, ಗ್ರಾಮಾಂತರ 46* 22, ಬೆಂಗಳೂರು ವಲಯ 66, ಅಜೇಯ 150 ರನ್ ಗಳಿಸಿ ಭರವಸೆ ಬ್ಯಾಟ್ಸ್ ಮನ್ ಆಗಿದ್ದಾರೆ.
ಈ ಆಯ್ಕೆ ಪ್ರಕ್ರಿಯೆ ಯಲ್ಲಿ ಅತ್ಯಧಿಕ ಮೊತ್ತ ಸೇರಿಸಿದ 2ನೆ ಆಟಗಾರನಾಗಿ ಹೊರ ಹೊಮ್ಮಿದ್ದಾರೆ, ಶಿವರಾಜ್ ಆಟಕ್ಕೆ ಗೌರವವಾಗಿ ಶಿವರಾಜ್ ಗೆ ಸಂಯುಕ್ತ ಗ್ರಾಮಾಂತರ ತಂಡಕ್ಕೆ ನಾಯಕನಾಗಿ ಮುಂದುವರಿಸಿದರು, ಇದು ಶಿವರಾಜ್ ಆಟಕ್ಕೆ ಸಿಕ್ಕ ಪ್ರತಿಭೆಯ ಫಲ.
ಶಿವರಾಜ್ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಿ ದಾವಣಗೆರೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳಗುವಂತಾಗಲಿ ಎಂದು ದಾವಣಗೆರೆ ಕ್ರಿಕೆಟ್ ಕ್ಲಬ್ ಅಧ್ಯಕ್ಷರು ಎಸ್ ಎಸ್ ಎಂ ,ಎಸ್. ಎಸ್. ,ಕಾರ್ಯದರ್ಶಿ ದಿನೇಶ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಸಿ. ಜಿ. ಶ್ರೀಪತಿ ಹಾಗೂ ತುಮಕೂರು ವಲಯದ ಸಂಚಾಲಕರಾದ ಶಶಿಧರ್ ಕೆ, ಚೇರ್ಮನ್ ಎಸ್. ಎಸ್. ಬಕ್ಕೇಶ್, ಎಲ್. ಎಂ. ಪ್ರಕಾಶ್, ಮೋಹನ್ ರಾವ್, ಬಾಲಕೃಷ್ಣ, ವಿಕಾಸ್ ಪಿ ಎಸ್, ಗುರುದೇವ್ ಅಂಬರ್ಕರ್, ತಿಮ್ಮೇಶ್, ಉಮೇಶ್ ಸಿರಿಗೆರೆ, ಮಹೇಶ್ ಪಟೇಲ್, ತೇಜು ನಾಯಕ್, ಹರಿಹರದ ರಾಘವೇಂದ್ರ, ದಾವಣಗೆರೆಯ ಎಲ್ಲಾ ಕ್ರಿಕೆಟ್ ಕ್ಲಬ್ ಗಳ ಸದಸ್ಯರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.