ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ಎನ್‌ಡಿಎ (NDA) ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಬಿಜೆಪಿ ಸಂಸದರ ನಡುವೆ ಕಾವೇರಿದ ಮಾತಿನ ಚಕಮಕಿ ನಡೆಯಿತು.
ಕಾಂಗ್ರೆಸ್ ಆಡಳಿತವಿರುವ ಜಾರ್ಖಂಡ್‌ನಲ್ಲಿ ಉದ್ಯೋಗಾಕಾಂಕ್ಷಿಗಳ ಮೇಲೆ ನಡೆದ ಗಲಾಟೆಯನ್ನು ಉಲ್ಲೇಖಿಸಿ, ಬಿಜೆಪಿ ಸಂಸದರೊಬ್ಬರು “ರಾಹುಲ್ ಗಾಂಧಿ ಜಾರ್ಖಂಡ್‌ಗೆ ಏಕೆ ಹೋಗಿಲ್ಲ? ಶೇಮ್, ರಾಹುಲ್ ಗಾಂಧಿ” ಎಂದು ಘೋಷಣೆ ಕೂಗಿದರು.
ಸಂಸತ್ತಿಗೆ ಆಗಮಿಸುತ್ತಿದ್ದ ಪ್ರಿಯಾಂಕಾ ಗಾಂಧಿ ಅವರು ಈ ಘೋಷಣೆಯನ್ನು ಕೇಳಿ ತಕ್ಷಣ ತಮ್ಮ ಹಾದಿಯಲ್ಲೇ ತಡೆದು ನಿಂತರು.
ಮಂದಹಾಸ ಬೀರುತ್ತಲೇ ಪ್ರತಿಭಟನಾ ಫಲಕವನ್ನು ವೀಕ್ಷಿಸಿದ ಅವರು, ಬಿಜೆಪಿ ಸಂಸದನಿಗೆ ದಿಟ್ಟ ಉತ್ತರ ನೀಡಿದರು. ಬಿಜೆಪಿ ನಾಯಕರು ಘೋಷಣೆ ಕೂಗುವುದನ್ನು ಮುಂದುವರಿಸಿದಾಗ, “ರಾಹುಲ್ ಜಿ ಜಾರ್ಖಂಡ್‌ನ ವಿದ್ಯಾರ್ಥಿಗಳನ್ನು ಈಗಾಗಲೇ ಭೇಟಿಯಾಗಿದ್ದಾರೆ” (Rahul ji Jharkhand k chhatro se mile bhi hai) ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.





Leave a comment