Home ಕ್ರೈಂ ನ್ಯೂಸ್ ಅಮೆರಿಕದಲ್ಲಿ ಭುಗಿಲೆದ್ದ ಆಕ್ರೋಶ: 12 ವಾರಗಳ ಗರ್ಭಿಣಿಯನ್ನು ನೆಲಕ್ಕೆೆ ತಳ್ಳಿ ಪೆಪ್ಪರ್ ಸ್ಪ್ರೇ ಮಾಡಿದ ಐಸಿಇ ಅಧಿಕಾರಿಗಳು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಮೆರಿಕದಲ್ಲಿ ಭುಗಿಲೆದ್ದ ಆಕ್ರೋಶ: 12 ವಾರಗಳ ಗರ್ಭಿಣಿಯನ್ನು ನೆಲಕ್ಕೆೆ ತಳ್ಳಿ ಪೆಪ್ಪರ್ ಸ್ಪ್ರೇ ಮಾಡಿದ ಐಸಿಇ ಅಧಿಕಾರಿಗಳು!

Share
ಅಮೆರಿಕ
Share

ಕ್ಯಾಲಿಫೋರ್ನಿಯಾ (ಅಮೆರಿಕ): ಅಮೆರಿಕದ ಕ್ಯಾಲಿಫೋರ್ನಿಯಾದ ಜೈಲೊಂದರ ಹೊರಗೆ ನಡೆದ ವಲಸೆ ವಿರೋಧಿ ಪ್ರತಿಭಟನೆಯ ವೇಳೆ, ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು 12 ವಾರಗಳ ಗರ್ಭಿಣಿಯಾಗಿರುವ ಅಮೆರಿಕದ ಪ್ರಜೆಯೊಬ್ಬರನ್ನು ಬಲವಂತವಾಗಿ ನೆಲಕ್ಕೆೆ ಎಳೆದು, ಪೆಪ್ಪರ್ ಸ್ಪ್ರೇ ಸಿಂಪಡಿಸಿ ಬಂಧಿಸಿರುವ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫೆಡರಲ್ ಅಧಿಕಾರಿಗಳ ಅತಿವರ್ತನೆ ಮತ್ತು ಬಲಪ್ರಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದಿ ಗಾರ್ಡಿಯನ್ ವರದಿಯ ಪ್ರಕಾರ, ಸಂತ್ರತಳನ್ನು 23 ವರ್ಷದ ಲಿಜ್ಬೆತ್ ವರ್ಗಾಸ್ ಆಂಡ್ರೇಡ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ಮತ್ತು ನಾದಿನಿಯೊಂದಿಗೆ ಸ್ಟಾನಿಸ್ಲಾಸ್ ಕೌಂಟಿ ಜೈಲಿನ ಹೊರಗೆ ಐಸಿಇ ಅಧಿಕಾರಿಗಳ ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮೂವರು ಐಸಿಇ ಅಧಿಕಾರಿಗಳು ಆಂಡ್ರೇಡ್ ಅವರನ್ನು ಬಲವಂತವಾಗಿ ನೆಲಕ್ಕೆೆ ಎಳೆದಿದ್ದಾರೆ. ವಕೀಲರ ಪ್ರಕಾರ, ಅವರು ಅಧಿಕಾರಿಯೊಬ್ಬರ ಮೇಲೆ ಕೈಯಿಟ್ಟ ನಂತರ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದ್ದು, ತೀವ್ರ ಅಸ್ವಸ್ಥಗೊಂಡ ಆಂಡ್ರೇಡ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗರ್ಭಿಣಿ ಮೇಲೆ ಹಲ್ಲೆ: 12 ವಾರಗಳ ಗರ್ಭಿಣಿಯಾಗಿರುವ ಅಮೆರಿಕದ ಪ್ರಜೆಯ ಮೇಲೆ ಫೆಡರಲ್ ಅಧಿಕಾರಿಗಳು ಇಷ್ಟು ಕ್ರೂರವಾಗಿ ವರ್ತಿಸಿರುವುದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ವಕೀಲರು ಪ್ರಶ್ನಿಸಿದ್ದಾರೆ.

ಆಸ್ಪತ್ರೆಗೆ ದಾಖಲು: ಘಟನೆಯ ಬಳಿಕ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ತಾಯಿ ಹಾಗೂ ಹುಟ್ಟಲಿರುವ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಅವರ ಕಾನೂನು ತಂಡ ತಿಳಿಸಿದೆ.

ಸ್ಥಳೀಯ ಪೊಲೀಸರ ಸ್ಪಷ್ಟನೆ: ಈ ಕಾರ್ಯಾಚರಣೆಗೂ ಸ್ಥಳೀಯ ಮೋಡೆಸ್ಟೋ ಪೊಲೀಸ್ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸ್ಥಳೀಯ ಕಾನೂನಿನಂತೆ ತಮ್ಮ ಸಿಬ್ಬಂದಿ ಇದರಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಮತ್ತು ಬೇ ಏರಿಯಾದಲ್ಲಿ ಹೆಚ್ಚುತ್ತಿರುವ ಫೆಡರಲ್ ವಲಸೆ ಕಾರ್ಯಾಚರಣೆಗಳ ಕುರಿತು ಸ್ಥಳೀಯ ಸಮುದಾಯಗಳು ಹಾಗೂ ಜನಪ್ರತಿನಿಧಿಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

Share

Recent Posts

Recent Comments

No comments to show.
Related Articles