ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ದಂಧೆ

On: June 5, 2024 10:14 AM
Follow Us:
---Advertisement---

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ಬಳಸಿಕೊಂಡು ಕಿಡಿಗೇಡಿಗಳು, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ದಂಧೆ ಆರಂಭಿಸಿದ್ದಾರೆ.

ವಿಡಿಯೋ ಬೇಕಾದರೆ ಡಿಎಂ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ. ಹಾಗೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಬೇಕೆಂದರೆ ಇಂತಿಷ್ಟು ಹಣ ನೀಡಬೇಕು ಎಂದೂ ಹಣ ಮಾಡುವ ದಂಧೆಗೆ ಕಿಡಿಗೇಡಿಗಳು ಕೈ ಹಾಕಿದ್ದಾರೆ.

ಕೆಲ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಇಡೀ ಹಾಸನ ಜಿಲ್ಲೆಯಲ್ಲಿ ಹರಿದಾಡಿತ್ತು. ಕಿಡಿಗೇಡಿಗಳು ಹಾಸನದ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಪೆನ್ ಡ್ರೈವ್‌ಗಳನ್ನು ಇಟ್ಟಿದ್ದರು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೋ ಕೋಡ ಹರಿಬಿಟ್ಟಿದ್ದರು. ವಿಡಿಯೋದಲ್ಲಿದ್ದ ಮಹಿಳೆಯ ಮುಖ ಕೂಡ ಬ್ಲರ್ ಮಾಡಿರಲಿಲ್ಲ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಅದೆಷ್ಟೋ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದೀಗ ಇದರೊಂದಿಗೆ ಕೆಲ ಕಿಡಿಗೇಡಿಗಳು ಇದೇ ವಿಡಿಯೋಗಳನ್ನು ಇಟ್ಟುಕೊಂಡು ದಂಧೆಗೆ ಇಳಿದಿದ್ದು, ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳಿವೆ. ಡಿಎಂ ಮಾಡಿ ಲೈಕ್ ಮಾಡಿ ವಿಡಿಯೋ ಬೇಕಿದ್ರೆ ಹಣ ಕಳಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಗೋಸ್ಕರ, ಹಣಕ್ಕಾಗಿ ಪ್ರಜ್ವಲ್ ರೇವಣ್ಣ ವಿಡಿಯೋ ಆಮಿಷವೊಡ್ಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಂತ್ರಸ್ತೆಯರ ಫೋಟೋ ಬಳಸಿ ದಂಧೆ ನಡೆಸುತ್ತಿದ್ದಾರೆ. ಈ ಕಿಡಿಗೇಡಿಗಳು ಕೆಲ ಸ್ಟಾರ್ ನಟಿಯರ ಫೋಟೋ ಬಳಸಿಯೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.

Join WhatsApp

Join Now

Join Telegram

Join Now

Leave a Comment