Home ಕ್ರೈಂ ನ್ಯೂಸ್ 90 ಅಶ್ಲೀಲ ವಿಡಿಯೋಗಳು… ಹಾಸಿನ ದಿಂಬಿನ ಕೆಳಗಡೆ ಸಿನಿಮಾ ತಾರೆಯರ ಅರೆನಗ್ನ ಫೋಟೋಗಳು: ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ನಲ್ಲಿ ಏನೇನಿತ್ತು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

90 ಅಶ್ಲೀಲ ವಿಡಿಯೋಗಳು… ಹಾಸಿನ ದಿಂಬಿನ ಕೆಳಗಡೆ ಸಿನಿಮಾ ತಾರೆಯರ ಅರೆನಗ್ನ ಫೋಟೋಗಳು: ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ನಲ್ಲಿ ಏನೇನಿತ್ತು?

Share
ಪ್ರಜ್ವಲ್ ರೇವಣ್ಣ
Share

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.

ಜೈಲಿನ ಬ್ಯಾರಕ್‌ನಲ್ಲಿ ಸಿಸಿಬಿ (CCB) ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್, ಪೆನ್ ಡ್ರೈವ್ ಹಾಗೂ ಚಾರ್ಜರ್ ಪತ್ತೆಯಾಗಿದೆ.

90ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆ:

ಜಪ್ತಿ ಮಾಡಲಾದ ಆಂಡ್ರಾಯ್ಡ್ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಸುಮಾರು 80 ರಿಂದ 90 ಅಶ್ಲೀಲ ವಿಡಿಯೋಗಳು ಹಾಗೂ ಮಹಿಳೆಯರ ಭಾವಚಿತ್ರಗಳಿರುವ ಪತ್ರಿಕಾ ತುಣುಕುಗಳು ಮತ್ತು ಹಾಸಿಗೆ ದಿಂಬಿನ ಕೆಳಗಡೆ ಸಿನಿಮಾ ತಾರೆಯರ ಅರೆನಗ್ನ ಫೋಟೋಗಳು ಪತ್ತೆಯಾಗಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಪ್ರಸ್ತುತ ಡಿಜಿಟಲ್ ಸಾಧನಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಫೋನ್‌ನಲ್ಲಿರುವ ಡೇಟಾ ಮತ್ತು ಡೌನ್‌ಲೋಡ್ ಮೂಲಗಳ ಕುರಿತು ತನಿಖೆ ತೀವ್ರಗೊಳಿಸಲಾಗಿದೆ.

ಜೈಲು ಅಧಿಕಾರಿ ಅಮಾನತು, ಶೋಕಾಸ್ ನೋಟಿಸ್:

ಹೈಪ್ರೊಫೈಲ್ ಕೈದಿಯ ಬಳಿ ನಿಷೇಧಿತ ಮೊಬೈಲ್ ತಲುಪಿದ್ದು ಹೇಗೆ ಎಂಬ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ಅವರನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಬೆಂಗಳೂರು ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಮತ್ತೊಂದು ಎಫ್‌ಐಆರ್ ದಾಖಲು:

ಈ ಗಂಭೀರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜತೆಗೆ ಅದೇ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ಅವರ ಹೆಸರನ್ನೂ ಸೇರಿಸಲಾಗಿದೆ.

ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಹಾಗೂ ಶಿಕ್ಷೆ ಅಮಾನತು ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಜೈಲಿನಲ್ಲಿ ಮೊಬೈಲ್ ಸೀಜ್ ಆಗಿರುವುದು ಅವರ ಕಾನೂನು ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದೆ

Share

Leave a comment

Leave a Reply

Your email address will not be published. Required fields are marked *